Job Description: * ಪಾಕಿಸ್ತಾನದ ಸ್ಪಿನ್ ದಿಗ್ಗಜ ಅಬ್ದುಲ್ ಖಾದಿರ್ ಮತ್ತು ವೆಸ್ಟ್ ಇಂಡೀಸ್ ನ ಬ್ಯಾಟಿಂಗ್ ದಿಗ್ಗಜ ಶಿವನಾರಾಯಣ್ ಚಂದ್ರಪಾಲ್ ಹಾಗೂ 2 ಬಾರಿ ಮಹಿಳಾ ವಿಶ್ವಕಪ್ ವಿಜೇತೆ ಇಂಗ್ಲೆಂಡ್ ತಂಡದ ನಾಯಕಿ ಚಾರ್ಲೋಟ್ ಎಡ್ವರ್ಡ್ಸ್ ಅವರನ್ನು ಐಸಿಸಿ ಹಾಲ್ ಆಫ್ ಫೇಮ್ ಗೆ ಸೇರ್ಪಡೆಗೊಳಿಸಲಾಗಿದೆ.* ಹಾಲಿ ಹಾಲ್ ಆಫ್ ಫೇಮರ್ ಗಳನ್ನು ಒಳಗೊಂಡಂತೆ ನಡೆಸಲಾದ ಮತದಾನ ಪ್ರಕ್ರಿಯೆ ಮೂಲಕ ಮೂವರು ಆಟಗಾರರನ್ನು ಆಯ್ಕೆ ಮಾಡಲಾಗಿದೆ.* ಪಾಕಿಸ್ತಾನದ ರಿಸ್ಟ್ ಸ್ಪಿನ್ನರ್ ಅಬ್ದುಲ್ ಖಾದಿರ್ 2019 ರಲ್ಲಿ ನಿಧನರಾಗಿದ್ದಾರೆ, 13 ವರ್ಷಗಳ ಕಾಲ ಕ್ರಿಕೆಟ್ ಜೀವನದಲ್ಲಿ 67 ಟೆಸ್ಟ್, 104 ಏಕದಿನ ಪಂದ್ಯಗಳಲ್ಲಿ ಕ್ರಮವಾಗಿ 236 ಹಾಗೂ 132 ವಿಕೆಟ್ ಪಡೆದಿದ್ದರು.* ಚಂದ್ರಪಾಲ್ ವಿಂಡೀಸ್ ಪರವಾಗಿ 164 ಟೆಸ್ಟ್ ಮಾತು 268 ಏಕದಿನ ಪಂದ್ಯ ಆಡಿದ್ದಾರೆ, ಒಟ್ಟಾರೆ 20 ಸಾವಿರಕ್ಕೂ ಹೆಚ್ಚು ರನ್ ತೆಗೆದಿದ್ದಾರೆ.