Job Description: * ಮಹಿಳಾ ಹಕ್ಕುಗಳ ಹೋರಾಟಗಾರ್ತಿ, ಹಣಕಾಸು ಕಾರ್ಯಕರ್ತೆಯಾಗಿದ್ದ ವಕೀಲೆ ಇಳಾ ಭಟ್ ಬುಧವಾರ (02/11/2022) ನಿಧನರಾದರು.* ಮಹಿಳೆಯರ ಆರ್ಥಿಕ ಕಲ್ಯಾಣಕ್ಕಾಗಿ ಅವರು ದೇಶದ ಮೊದಲ ಮಹಿಳಾ ಬ್ಯಾಂಕ್ ಕೋ ಆಪರೇಟಿವ್ ಬ್ಯಾಂಕ್ ಆಫ್ ಸೇವಾ ಅನ್ನು 1973ರಲ್ಲಿ ಸ್ಥಾಪಿಸಿದರು. * 1979ರಲ್ಲಿ ಮಹಿಳಾ ವಿಶ್ವ ಬ್ಯಾಂಕಿಂಗ್ ಸಹ ಸ್ಥಾಪಿಸಿದರು.* * ಇವರಿಗೆ ಒಲಿದ ಪ್ರಶಸ್ತಿಗಳು : -- 1986ರಲ್ಲಿ ದೇಶದ ಮೂರನೇ ಅತ್ಯುನ್ನತ ನಾಗರಿಕ ಗೌರವ ಪದ್ಮ ಭೂಷಣ ಪ್ರಶಸ್ತಿ - 1985ರಲ್ಲಿ ದೇಶದ ನಾಲ್ಕನೇ ಅತ್ಯುನ್ನತ ಗೌರವವಾದ ಪದ್ಮಶ್ರೀಗೆ ಪಾತ್ರರಾಗಿದ್ದರು. - ಉದ್ಯಮಶೀಲತೆ ಮೂಲಕ ಮಹಿಳೆಯರ ಸಬಲೀಕರಣಕ್ಕೆ ಮಾಡಿದ ಪ್ರಯತ್ನಗಳಿಗಾಗಿ 2011ರಲ್ಲಿ ಗಾಂಧಿ ಶಾಂತಿ ಪ್ರಶಸ್ತಿ ದೊರಕಿತ್ತು. - 1977ರಲ್ಲಿ ಅವರು ಸಮುದಾಯ ನಾಯಕತ್ವಕ್ಕಾಗಿ ರಾಮೋನ್ ಮ್ಯಾಗ್ಸೆಸ್ಸೆ ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ.* ರಾಕ್‌ಫೆಲ್ಲರ್ ಫೌಂಡೇಷನ್‌ನಲ್ಲಿ ಹತ್ತು ವರ್ಷಕ್ಕೂ ಹೆಚ್ಚು ಸಮಯ ಟ್ರಸ್ಟಿಯಾಗಿದ್ದರು.