Job Description: * ಕೋವಿಡ್ ನಂತರ ಆರ್ಥಿಕ ಹಿಂಜರಿತ -ಸಂಕಷ್ಟದ ಬಳಿಕ, ರಾಜ್ಯದಲ್ಲಿ ಮೊದಲಬಾರಿಗೆ ಆಯೋಜಿಸಿರುವ 'ಜಾಗತಿಕ ಬಂಡವಾಳ ಹೂಡಿಕೆದಾರರ ಸಮಾವೇಶ'ವು ರಾಜ್ಯ ಸರ್ಕಾರದ ನಿರೀಕ್ಷೆಗೂ ಮೀರಿ ಬಂಡವಾಳವನ್ನು ಆಕರ್ಷಿಸಿದೆ. * ಜಾಗತಿಕ ಹೂಡಿಕೆದಾರರ ಸಮಾವೇಶ ಮೊದಲ ದಿನವೇ ನಿರೀಕ್ಷೆಗೂ ಮೀರಿ ಗುರಿ ದಾಟಿದ ಬಂಡವಾಳದ ಮೊತ್ತ. * ಸಮಾವೇಶದ ಮೂಲಕ ಒಟ್ಟು 5 ಲಕ್ಷ ಕೋಟಿ ಮೊತ್ತದ ಹೂಡಿಕೆ ರಾಜ್ಯಕ್ಕೆ ಬರಲಿದೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಸಚಿವ ಮುರುಗೇಶ ನಿರಾಣಿ ತಮ್ಮ ನಿರೀಕ್ಷೆಯನ್ನು ವ್ಯೆಕ್ತಪಡಿಸಿದರು. ಆದರೆ ಮೊದಲ ದಿನದ ಹೂಡಿಕೆ ಒಪ್ಪಂದಗಳ ಪತ್ರ ಅಂತಿಮಗೊಂಡಾಗ ಒಟ್ಟು ಮೊತ್ತ 7 .6 ಲಕ್ಷ ಕೋಟಿಗೆ ಮುಟ್ಟಿದೆ ಎಂದು ನಿರಾಣಿಯವರು ತಿಳಿಸಿದರು. * ಅಂತಿಮಗೊಂಡ ಒಪ್ಪಂದಗಳ ಪ್ರಕಾರ ಹೆಚ್ಚಿನ ಪ್ರಮಾಣದ ಹೂಡಿಕೆಯು ಗ್ರೀನ್ ಹೈಡ್ರೋಜನ್ (ಇದನ್ನು ಇಂಧನವಾಗಿ ಬಳಸಲಾಗುತ್ತದೆ) ವಲಯದಲ್ಲಿ ಆಗಲಿದೆ. * ನವೀಕರಿಸಬಹುದಾದ ಇಂಧನ ವಲಯದಲ್ಲಿ ಕೊಡ ವಿವಿಧ ಕಂಪನಿಗಳು ದೊಡ್ಡ ಪ್ರಮಾಣದಲ್ಲಿ ಹಣ ತೊಡಗಿಸಲಿದೆ. * ಮುಂದಿನ ಏಳು ವರ್ಷದಲ್ಲಿ ಒಟ್ಟು 1 ಲಕ್ಷ ಕೋಟಿ ಹಣವನ್ನು ಅದಾನಿ ಸಮೂಹವು ರಾಜ್ಯದಲ್ಲಿ ಹೂಡಿಕೆ ಮಾಡಲಿದೆ ಎಂದು ಕರಣ್ ಅದಾನಿ ತಿಳಿಸಿದರು. ಹಾಗೂ ಸಜ್ಜನ್ ಬಿಂದಲ್ ಅವರು ಮುಂದಿನ ಐದು ವರ್ಷಗಳಲ್ಲಿ ರಾಜ್ಯದಲ್ಲಿ ಒಟ್ಟು 1 ಲಕ್ಷ ಕೋಟಿಯಷ್ಟು ಹೂಡಿಕೆ ಮಾಡುವುದಾಗಿ ಆಲೋಚನೆ ಇರುವುದಾಗಿ ಹೇಳಿದರು. * ನವೀಕರಿಸಬಹುದಾದ ಇಂಧನ ಉತ್ಪಾದನೆಯಲ್ಲಿ ಒಟ್ಟು 50 ಸಾವಿರ ಕೋಟಿ ಹೂಡಿಕೆ ಮಾಡಲಿದ್ದು, ಈ ಮೊತ್ತದಲ್ಲಿ ಹೆಚ್ಚಿನ ಪಾಲು ಕರ್ನಾಟಕದಲ್ಲಿ ಹೂಡಿಕೆ ಆಗಲಿದೆ ಎಂದು ಸ್ಟರ್ಲೈಟ್ ಪವರ್ ಕಂಪನಿಯ ವ್ಯವಸ್ಥಾಪಕ ನಿರ್ದೇಶಕ ಪ್ರತೀಕ್ ಅಗರ್ವಾಲ್ ತಿಳಿಸಿದರು.