Job Description: * ಸಾರ್ವಜನಿಕರ ಸಂಪರ್ಕ ಹೊಂದಿರುವ ಕ್ಷೇತ್ರ / ಹೊರವಲಯ ಕಚೇರಿಗಳ ಮೇಲೆ ವಿಶೇಷ ಗಮನ ಗೃಹ ವ್ಯವಹಾರಗಳ ಸಚಿವಾಲಯವು 2021 ರಲ್ಲಿ ನಡೆಸಲಾದ ʻವಿಶೇಷ ಅಭಿಯಾನʼದ ಮಾದರಿಯಲ್ಲಿ 2022 ರ ಅಕ್ಟೋಬರ್ 2 ರಿಂದ 2022 ರ ಅಕ್ಟೋಬರ್ 31 ರವರೆಗೆ ʻವಿಶೇಷ ಅಭಿಯಾನ 2.0ʼ ಅನ್ನು ನಡೆಸುತ್ತಿದೆ.* ಪೂರ್ವಸಿದ್ಧತಾ ಹಂತದಲ್ಲಿ (ಸೆಪ್ಟೆಂಬರ್ 14 ರಿಂದ ಸೆಪ್ಟೆಂಬರ್ 30, 2022 ರವರೆಗೆ), ಸಚಿವಾಲಯವು ಒಟ್ಟು 5,629 ಪ್ರಚಾರ ತಾಣಗಳನ್ನು ಸ್ವಚ್ಛತಾ ಅಭಿಯಾನಕ್ಕಾಗಿ ಗುರುತಿಸಿದೆ.* ಸಾರ್ವಜನಿಕ ಸಂಪರ್ಕವನ್ನು ಹೊಂದಿರುವ ಕ್ಷೇತ್ರ / ಹೊರಠಾಣೆ ಕಚೇರಿಗಳ ಮೇಲೆ ವಿಶೇಷ ಗಮನ ಹರಿಸಲಾಗಿದೆ, ಪರಿಣಾಮಕಾರಿ ಇತ್ಯರ್ಥಕ್ಕಾಗಿ ಸಂಸದರ ಉಲ್ಲೇಖಗಳು, ಸಂಸದೀಯ ಭರವಸೆಗಳು, ಐಎಂಸಿ ಉಲ್ಲೇಖಗಳು, ರಾಜ್ಯ ಸರಕಾರದ ಉಲ್ಲೇಖಗಳು, ಪ್ರಧಾನಮಂತ್ರಿಗಳ ಕಚೇರಿಗಳ ಉಲ್ಲೇಖಗಳು, ಸಾರ್ವಜನಿಕ ಕುಂದುಕೊರತೆಗಳು ಮತ್ತು ಪಿಜಿ ಅಪೀಲುಗಳಂತಹ ವಿವಿಧ ವಿಭಾಗಗಳಲ್ಲಿ ಬಾಕಿ ಪ್ರಕರಣಗಳನ್ನು ಗುರುತಿಸಲಾಗಿದೆ ಮತ್ತು ವಿಲೇವಾರಿ ಮಾಡಿ ʻಎನ್ಎಐʼಗೆ ಕಳುಹಿಸಲಾಗುವ ಕಡತಗಳನ್ನು ಗುರುತಿಸಲಾಗಿದೆ. * ಲೆಹ್‌ನಿಂದ ಇಟಾನಗರದವರೆಗೆ ʻಸಿಎಪಿಎಫ್ʼಗಳು ʻವಿಶೇಷ ಅಭಿಯಾನ 2.0ʼ ಅನ್ನು ನಡೆಸುತ್ತಿವೆ. ಇತರ ಅಧೀನ ಕಚೇರಿಗಳು ಸಹ ಸಕ್ರಿಯವಾಗಿ ಭಾಗವಹಿಸುತ್ತಿವೆ. * ʻವಿಶೇಷ ಅಭಿಯಾನ 2.0ʼ ಗುರಿಯನ್ನು ಸಾಧಿಸಲು ಗೃಹ ಸಚಿವಾಲಯ ಸಾಧ್ಯವಾದ ಎಲ್ಲಾ ಪ್ರಯತ್ನಗಳನ್ನು ಮಾಡುತ್ತಿದೆ. ʻವಿಶೇಷ ಅಭಿಯಾನ 2.0ʼರ ಕೆಲವು ಛಾಯಾಚಿತ್ರಗಳನ್ನು ಕೆಳಗೆ ಪ್ರದರ್ಶಿಸಲಾಗಿದೆ.