Job Description: * ಹಿಮಾಚಲ ಪ್ರದೇಶದ ಚಂಬಾದಲ್ಲಿಎರಡು ಜಲವಿದ್ಯುತ್‌ ಯೋಜನೆಗಳಿಗೆ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಶಂಕುಸ್ಥಾಪನೆ ನೆರವೇರಿಸಿದರು, ಮತ್ತು ಪ್ರಧಾನಮಂತ್ರಿ ಗ್ರಾಮ ಸಡಕ್‌ ಯೋಜನೆ (ಪಿಎಂಜಿಎಸ್‌ ವೈ)-3 ಕ್ಕೆ ಚಾಲನೆ ನೀಡಿದರು.* ಜಲವಿದ್ಯುತ್‌ ಯೋಜನೆಗಳಾದ 48 ಮೆಗಾವ್ಯಾಟ್‌ ಚಂಜು-3 ಜಲವಿದ್ಯುತ್‌ ಯೋಜನೆ ಮತ್ತು 30 ಮೆಗಾವ್ಯಾಟ್‌ ಸಾಮರ್ಥ್ಯ‌ದ ದೇವಥಾಲ್‌ ಚಂಜು ಜಲವಿದ್ಯುತ್‌ ಯೋಜನೆಗೆ ಶಂಕುಸ್ಥಾಪನೆ ನೆರವೇರಿಸಿದರು. ಈ ಎರಡೂ ಯೋಜನೆಗಳು ವಾರ್ಷಿಕವಾಗಿ 270 ದಶಲಕ್ಷ ಯೂನಿಟ್‌ಗಿಂತಲೂ ಹೆಚ್ಚು ವಿದ್ಯುತ್ತನ್ನು ಉತ್ಪಾದಿಸುತ್ತವೆ ಮತ್ತು ಈ ಯೋಜನೆಗಳಿಂದ ಹಿಮಾಚಲ ಪ್ರದೇಶವು ಸುಮಾರು 110 ಕೋಟಿ ರೂ.ಗಳ ವಾರ್ಷಿಕ ಆದಾಯವನ್ನು ಪಡೆಯುವ ನಿರೀಕ್ಷೆಯಿದೆ.