Job Description: * ಇಂಡೋನೇಷ್ಯಾ ದ ಕಂಜೂರುಹಾನ್ ಕ್ರೀಡಾಂಗಣದಲ್ಲಿ ಸ್ಥಳೀಯ ಅರೆಮಾ ಎಫ್ ಸಿ ಮತ್ತು ಪೆರ್ಸಿಬಾಯಾ ಸುರಬಯಾ ನಡುವಿನ ಪಂದ್ಯದ ನಂತರ ಹಿಂಸಾಚಾರ ಮತ್ತು ಕಾಲ್ತುಳಿತದಿಂದಾಗಿ 125 ಜನ ಸಾವನ್ನಪ್ಪಿದ್ದಾರೆ. 320 ಕ್ಕೂ ಹೆಚ್ಚು ಜನಕ್ಕೆ ಗಂಭೀರ ಗಾಯವಾಗಿದೆ. * ಅಕ್ಟೋಬರ್ 1 ಶನಿವಾರ ಮಲಾಂಗ್ ನ ಕಂಜುರುಹಾನ್ ಕ್ರೀಡಾಂಗಣದಲ್ಲಿ ಸುರಬಯಾ ವಿರುದ್ಧ 3-2 ಅಂತರದಿಂದ ಅರೆಮಾ ಎಫ್‌ಸಿ ಪೆರ್ಸಿಬಾಯಾ ತಂಡ ಸೋತ ನಂತರ ಆ ತಂಡದ ಅಭಿಮಾನಿಗಳು ಮೈದಾನಕ್ಕೆ ನುಗ್ಗಿ ಗಲಾಟೆ ನಡೆಸಿದ್ದಾರೆ. ಇಬ್ಬರು ಪೊಲೀಸ್ ಅಧಿಕಾರಿಗಳು ಸೇರಿದಂತೆ ಕನಿಷ್ಠ 125 ಜನರು ಸಾವನ್ನಪ್ಪಿದ್ದಾರೆ, 34 ಜನರು ಕ್ರೀಡಾಂಗಣದೊಳಗೆ ಮೃತಪಟ್ಟರೆ, ಉಳಿದವರು ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ. * ಪಂದ್ಯಗಳ ಸಂದರ್ಭದಲ್ಲಿ ಜನರನ್ನು ನಿಯಂತ್ರಿಸಲು ಬಂಧೂಕು ಅಥವಾ ಅಶ್ರುವಾಯು ಉಪಯೋಗಿಸಬಾರದು ಎಂದು ಅಂತಾರಾಷ್ಟ್ರೀಯ ಫುಟ್ಬಾಲ್ ಫೆಡರೇಷನ್ ನಿಯಮವಾಗಿದೆ ಹಾಗಾಗಿ ಜಾವಾ ಪೊಲೀಸರು ತಕ್ಷಣಕ್ಕೆ ಪ್ರತಿಕ್ರಿಯಿಸಲು ನಿರಾಕರಿಸಿದ್ದಾರೆ. * ಘಟನೆಯ ಬಗ್ಗೆ ವರದಿ ನೀಡಲು ಫಿಫಾ ವು ಇಂಡೋನೇಷ್ಯಾದ ಪಿಎಸ್ಎಸ್ಐ ಫುಟ್ಬಾಲ್ ಸಂಸ್ಥೆಗೆ ಆದೇಶ ನೀಡಿದೆ. * ಪಿಎಸ್ಎಸ್ಐ ಸಂಸ್ಥೆಯು ತನಿಖಾ ತಂಡವನ್ನು ಮಾಲಾಂಗ್ಗೆ ಕಳುಹಿಸಿದೆ. * ಮಾನವ ಹಕ್ಕುಗಳ ಆಯೋಗವು ಅಶ್ರುವಾಯು ಪ್ರಯೋಗದ ಕುರಿತು ತನಿಖೆ ನಡೆಸಲು ಆಯೋಜಿಸಿದೆ.