Job Description: * 23 ಐಐಟಿಗಳಿಂದ 2022 ಅಕ್ಟೋಬರ್ 14 ಮತ್ತು 15 ರಂದು ಸಂಶೋಧನೆ ಮತ್ತು ಅಭಿವೃದ್ಧಿ ಕುರಿತು ಮೆಗಾಮೇಳವನ್ನು ಆಯೋಜಿಸಲಾಗಿದೆ. * ಇನ್ವೆಂಟಿವ್ ಇದೊಂದು ಸಂಶೋಧನೆ ಮತ್ತು ಅಭಿವೃದ್ಧಿಯ ಮೆಗಾ ಮೇಳವಾಗಿದೆ. ಇದರಿಂದ ಸರ್ಕಾರಕ್ಕೆ ಉಪಯೋಗವಾಗುವಂತೆ ಮೇಕ್ ಇನ್ ಇಂಡಿಯಾ ಮತ್ತು ಡಿಜಿಟಲ್ ಇಂಡಿಯಾಗಳಿಗೆ ಅನುಗುಣವಾಗಿ ನಾವೀನ್ಯತೆ-ನೇತೃತ್ವದ ಬೆಳವಣಿಗೆ ಮತ್ತು ಕೈಗೆಟುಕುವ ತಂತ್ರಜ್ಞಾನಗಳ ಅಭಿವೃದ್ಧಿಯನ್ನು ಉತ್ತೇಜಿಸುವ ಗುರಿಯನ್ನು ಹೊಂದಿದೆ.* ಭಾರತದಿಂದ ಒಟ್ಟು 23 ತಂತ್ರಜ್ಞಾನ ಸಂಸ್ಥೆಗಳಿಂದ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. 75ನೇ ಸ್ವಾತಂತ್ಯೋತ್ಸವದ ಅಂಗವಾಗಿ ಆಜಾದಿ ಕಾ ಅಮೃತ್ ಮಹೋತ್ಸವದ ಭಾಗವಾಗಿ ಇದನ್ನು ಆಯೋಜಿಸಲಾಗಿದೆ.* ಈ ಕಾರ್ಯಕ್ರಮದ ಮೇಲ್ವಿಚಾರಣೆಯನ್ನು ಐಐಟಿ-ಮದ್ರಾಸ್ ಆಡಳಿತ ಮಂಡಳಿಯ ಅಧ್ಯಕ್ಷ ಡಾ. ಪವನ್ ಗೋಯೆಂಕಾ ಮತ್ತು ಐಐಟಿ-ಹೈದರಾಬಾದ್ ಮತ್ತು ಐಐಟಿ-ರೂರ್ಕಿಯ ಆಡಳಿತ ಮಂಡಳಿಯ ಅಧ್ಯಕ್ಷ ಡಾ. ಬಿವಿಆರ್ ಮೋಹನ್ ರೆಡ್ಡಿ ನೇತೃತ್ವದ ಸ್ಟೀರಿಂಗ್ ಕಮೀಟಿಯಿಂದ ಮಾಡಲಾಗುತ್ತದೆ. * ಶ್ರೇಣಿ 2 ಮತ್ತು 3 ನಗರಗಳಲ್ಲಿನ ಸಂಸ್ಥೆಗಳ ವಿದ್ಯಾರ್ಥಿಗಳು ಮತ್ತು ನಿರ್ವಾಹಕರು ಮತ್ತು CII, FICCI ಮತ್ತು NASSCOM ನ ಪ್ರತಿನಿಧಿಗಳನ್ನು ಒಳಗೊಂಡಂತೆ ಕಾರ್ಯನಿರ್ವಹಿಸುತ್ತದೆ.* ಒಟ್ಟಾರೆ 75 ಪ್ರಾಜೆಕ್ಟ್‌ಗಳನ್ನು 20 ಥೀಮ್‌ಗಳಲ್ಲಿ ಪ್ರದರ್ಶಿಸಲಾಗುತ್ತದೆ. ರಕ್ಷಣೆ ಮತ್ತು ಏರೋಸ್ಪೇಸ್, ಆರೋಗ್ಯ, ಪರಿಸರ ಮತ್ತು ಸುಸ್ಥಿರತೆ, ಸ್ಮಾರ್ಟ್ ಸಿಟಿಗಳು ಮತ್ತು ಮೂಲಸೌಕರ್ಯ, ರೊಬೊಟಿಕ್ಸ್, ಸೆನ್ಸರ್‌ಗಳು ಮತ್ತು ಆಕ್ಯೂವೇಟರ್‌ಗಳು ಕೂಡ ಇದರಲ್ಲಿ ಸೇರಿವೆ.