Job Description: * ತನ್ನ ಪ್ರತಿಸ್ಪರ್ಧಿ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದ 300 ಮೂನ್‌ಲೈಟಿಂಗ್ ಮಾಡುತ್ತಿದ್ದ ಉದ್ಯೋಗಿಗಳನ್ನು ವಿಪ್ರೋ ಪತ್ತೆ ಮಾಡಿದ್ದು, ಈ ಉದ್ಯೋಗಿಗಳ ಸೇವೆಯನ್ನು ವಜಾಗೊಳಿಸಲಾಗಿದೆ ಎಂದು ವಿಪ್ರೋ ಅಧ್ಯಕ್ಷ ರಿಷಾದ್ ಪ್ರೇಮ್‌ಜಿ ಹೇಳಿದ್ದಾರೆ. * ಟೆಕ್ ಉದ್ಯಮದಲ್ಲಿನ ಮೂನ್‌ಲೈಟಿಂಗ್ ಕುರಿತು ಮಾತನಾಡಿದ ಮೊದಲ ವ್ಯಕ್ತಿ ವಿಪ್ರೋದ ಅಧ್ಯಕ್ಷರಾಗಿದ್ದು ಒಂದು ಕಂಪನಿಯ ಸಮಯದಲ್ಲಿ ಬೇರೆ ಕಂಪನಿಯೊಂದಕ್ಕೆ ಕೆಲಸ ಮಾಡಬೇಡಿ. ಇದು ಕಾನೂನು ಬಾಹಿರ, ಅನೈತಿಕ ಮತ್ತು ಮೋಸವೆಂದು ಹೇಳಿದರು. * * ಮೂನ್‌ಲೈಟಿಂಗ್ ಎಂದರೇನು ? * ಲಿಸ್ಟೆಡ್ ಕಂಪನಿಗಳಲ್ಲಿನ ನೌಕರರು ಏಕಕಾಲದಲ್ಲಿ ಇನ್ನೊಂದು ಕಂಪನಿ, ಮುಖ್ಯವಾಗಿ ಪ್ರತಿಸ್ಪರ್ಧಿ ಕಂಪನಿಗಳಲ್ಲಿ ಕೆಲಸ ಮಾಡುವುದನ್ನು ಮೂನ್‌ಲೈಟಿಂಗ್ ಎಂದು ಕರೆಯಲಾಗುತ್ತದೆ. * ಕಂಪನಿಗಳ ನೌಕರರ ನೀತಿ ಸಂಹಿತೆ ಪ್ರಕಾರ, ಓರ್ವ ಉದ್ಯೋಗಿ ಎರಡೂ ಕಡೆ ಕೆಲಸ ಮಾಡಲು ಅವಕಾಶ ಇಲ್ಲ. ಕೊರೊನಾ ನಂತರ ಮೂನ್‌ಲೈಟ್ ಮಾಡುತ್ತಿರುವರ ಸಂಖ್ಯೆ ಹೆಚ್ಚಾಗುತ್ತಿದೆ ಎಂಬುದು ಟೆಕ್‌ ಕಂಪನಿಗಳ ಆರೋಪ.