Job Description: * ಕನ್ನಡದ ಕಡ್ಡಾಯ ಬಳಕೆಗೆ ಕಾನೂನಿನ ಬಲ ನೀಡಲು ಹೊಸ ಕಾಯ್ದೆಯನ್ನು ಜಾರಿ ಮಾಡುತ್ತಿರುವುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ವಿಧಾನಸಭೆಯಲ್ಲಿಂದು ಘೋಷಿಸಿದರು.* ಕನ್ನಡ ಕಡ್ಡಾಯಕ್ಕೆ ಕಾನೂನಾತ್ಮಕವಾಗಿ ರಕ್ಷಣೆ ನೀಡಲು 'ಕನ್ನಡ ಬಳಕೆ ಕಡ್ಡಾಯ' ಕಾನೂನನ್ನು ಜಾರಿ ಮಾಡುತ್ತಿದ್ದೇವೆ. ಪ್ರಥಮ ಬಾರಿಗೆ ಇಂತಹ ಒಂದು ಕಾನೂನನ್ನು ಜಾರಿ ಮಾಡಲಾಗುತ್ತಿದೆ.* * ಪ್ರಮುಖ ಅಂಶಗಳು : - - 1 ರಿಂದ 10 ತಗತಿಯ ವರೆಗೆ ಕರ್ನಾಟಕ ಮತ್ತು ಹೊರ ರಾಜ್ಯಗಳಲ್ಲಿ ಕನ್ನಡ ಮಾಧ್ಯಮದಲ್ಲಿ ಓದಿದ ಎಲ್ಲರಿಗೂ ಉನ್ನತ, ತಾಂತ್ರಿಕ ಮತ್ತು ವೃತ್ತಿ ಶಿಕ್ಷಣದಲ್ಲಿ ಮೀಸಲಾತಿ ನೀಡಬೇಕು.- ರಾಜ್ಯ ಸರ್ಕಾರ, ಸ್ಥಳೀಯ ಪ್ರಾಧಿಕಾರಗಳು, ಶಾಸನಬದ್ಧ ಮತ್ತು ಶಾಸನಬದ್ಧವಲ್ಲದ ನಿಕಾಯಗಳು, ಸಹಕಾರಿ ಸಂಘಗಳು, ರಾಜ್ಯದಲ್ಲಿ ಇತರ ಸಂಘಗಳಲ್ಲಿ ನೇಮಕಾತಿ ಪಡೆಯಲು ಕನ್ನಡ ಭಾಷಾ ಜ್ಞಾನ ಕಡ್ಡಾಯ.- ಅಧೀನ ನ್ಯಾಯಾಲಯಗಳಲ್ಲಿ ಮತ್ತು ನ್ಯಾಯಮಂಡಳಿ ಗಳಲ್ಲಿ ಕನ್ನಡ ಭಾಷೆಯನ್ನು ಬಳಸಬೇಕು.- ಕನ್ನಡಿಗರಿಗೆ ಉದ್ಯೋಗ ಸೃಜಿಸಲು ಪ್ರತ್ಯೇಕ ಪೋರ್ಟಲ್ ಅನ್ನು ಸ್ಥಾಪಿಸುವುದು.- ಸರ್ಕಾರಿ ಅಧಿಕಾರಿಗಳು, ಸಾರ್ವಜನಿಕರು, ವ್ಯಾಪಾರಸ್ಥರು ಕಾಯ್ದೆ ಉಲ್ಲಂಘಿಸಿದರೆ ದಂಡವನ್ನೂ ವಿಧಿಸುವುದು.ರಾಜ್ಯ ಮೊದಲ ಭಾರಿಗೆ ಇಂಜಿನಿಯರಿಂಗ್ ಕೋರ್ಸ್ ಅನ್ನು ಕನ್ನಡದಲ್ಲಿ ನಡೆಸಲಾಗುತ್ತಿದೆ ಎಂದು ಹೇಳಿದರು.