Job Description: * ರಾಷ್ಟ್ರೀಯ ಅವಶ್ಯಕ ಔಷಧಗಳ ಪಟ್ಟಿಗೆ ಮತ್ತೆ 34 ಔಷಧ ಸೇರ್ಪಡೆ ಮಾಡುವ ಕೇಂದ್ರ ಸರ್ಕಾರದ ನಿರ್ಧಾರವು ಕೈಕೊಂಡಿದೆ ಇಅದ್ರಿಂದಾಗಿ ಗಂಭೀರ ಕಾಯಿಲೆ ಎದುರಿಸುತ್ತಿರುವ ರೋಗಿಗಳು ಹಾಗೂ ಅವರ ಕುಟುಂಬದವರ ಪಾಲಿಗೆ ಅನುಕೂಲಕರವಾಗುವ ಕ್ರಮ ಇದಾಗಿದೆ.* ಈ 34 ಔಷಧ ಸೇರ್ಪಡೆಮಾಡುವುದರಿಂದಾಗಿ ಒಟ್ಟು ಔಷಧಗಳ ಸಂಖ್ಯೆ 384 ಕ್ಕೆ ಏರಿಕೆಯಾಗಿದೆ.* ಕೇಂದ್ರ ಆರೋಗ್ಯ ಸಚಿವಾಲಯವು 2018 ರಲ್ಲಿ ಸ್ವತಂತ್ರ ರಾಷ್ಟ್ರೀಯ ವೈದ್ಯಕೀಯ ಸ್ಥಾಯಿ ಸಮಿತಿಯನ್ನು ರಚಿಸಿತ್ತು.* ವೆಚ್ಚ, ಸುರಕ್ಷತೆ ಹಾಗೂ ದಕ್ಷತೆ- ಈ ಮೂರು ಅಂಶಗಳನ್ನು ಆಧರಿಸಿ ಎನ್‌ಎಲ್‌ಇಎಂ ಸಿದ್ಧಪಡಿಸಲಾಗುತ್ತದೆ.* ಸಬ್‌ಕೋ ದವಾಯಿ, ಸಸ್ತಿ ದವಾಯಿ' (ಸರ್ವರಿಗೂ ಔಷಧ, ಅಗ್ಗದ ಔಷಧ) ಎಂಬ ಪ್ರಧಾನಿ ನರೇಂದ್ರ ಮೋದಿ ಅವರ ಘೋಷಣೆಯನ್ನು ಜಾರಿಗೊಳಿಸುವ ಕ್ರಮವಾಗಿ ಜನೌಷಧಿ ಮಳಿಗೆಗಳನ್ನು ದೇಶಾದ್ಯಂತ ಆರಂಭಿಸುವ ಮೂಲಕ ಗಂಭೀರವಲ್ಲದ ಕಾಯಿಲೆಗಳಿಗೆ ಅಗ್ಗದ ಬೆಲೆಯಲ್ಲಿ ಔಷಧ ದೊರೆಯಲು ಆಸ್ಪದ ಮಾಡಿಕೊಡಲಾಗಿದೆ.* ಕೆಲ ಕಾಯಿಲೆಗಳಿಗೆ ತಜ್ಞರ ಸಲಹೆ-ಸೂಚನೆ ಇಲ್ಲದೆ ಮದ್ದು ಸೇವಿಸುವುದು ಅನೇಕ ಅಡ್ಡ ಪರಿಣಾಮಗಳಿಗೆ ಕಾರಣವಾಗುತ್ತದೆ.