Job Description: * ಹಿರಿಯ ವಕೀಲ ಮುಕುಲ್ ರೋಹಟಗಿ ಅವರು ಎರಡನೇ ಬಾರಿಗೆ ಭಾರತದ ಅಟಾರ್ನಿ ಜನರಲ್ ಆಗಲು ಸಿದ್ಧರಾಗಿದ್ದಾರೆ* ಹಾಲಿ ಎಜಿ ಕೆ ಕೆ ವೇಣುಗೋಪಾಲ್ ಅವರ ಅವಧಿ ಸೆಪ್ಟೆಂಬರ್ 30 ರಂದು ಕೊನೆಗೊಳ್ಳಲಿರುವುದರಿಂದ ಅವರ ಸ್ಥಾನಕ್ಕೆ ಈ ಹಿಂದೆ ಅಟಾರ್ನಿ ಜನರಲ್ ಆಗಿ ಕಾರ್ಯ ನಿರ್ವಹಿಸಿದ್ದ ಹಿರಿಯ ವಕೀಲ ಮುಕುಲ್ ರೋಹಟಗಿ ಅವರನ್ನೇ ಮರು ಆಯ್ಕೆ ಮಾಡಲು ಕೇಂದ್ರ ಸರ್ಕಾರ ನಿರ್ಧರಿಸಿದೆ ಎನ್ನಲಾಗಿದೆ.* ಮುಕುಲ್ ರೋಹಟಗಿ ಅವರು ಅಕ್ಟೋಬರ್ 1, 2022 ರಿಂದ ಅಟಾರ್ನಿ ಜನರಲ್ ಆಗಿ ತಮ್ಮ ಎರಡನೇ ಅವಧಿಯನ್ನು ಪ್ರಾರಂಭಿಸಲಿದ್ದಾರೆ ಎಂದು ತಿಳಿದು ಬಂದಿದೆ. * ಮುಕುಲ್‌ ರೋಹಟಗಿ 2014 ರಿಂದ 2017 ರವರೆಗೆ ದೇಶದ ಅಟಾರ್ನಿ ಜನರಲ್‌ ಆಗಿ ಮೂರು ವರ್ಷದ ಅವಧಿಗೆ ಕಾರ್ಯನಿರ್ವಹಿಸಿದರು.* ಭಾರತದ ಅತ್ಯಂತ ಉನ್ನತ ವಕೀಲರಲ್ಲಿ ಒಬ್ಬರಾದ ರೋಹಟಗಿ ಅವರು ಗುಜರಾತ್ ಸರ್ಕಾರವನ್ನು ಪ್ರತಿನಿಧಿಸಿದ ಗುಜರಾತ್ ಗಲಭೆ ಪ್ರಕರಣ ಸೇರಿದಂತೆ ಹಲವಾರು ಪ್ರಮುಖ ಪ್ರಕರಣಗಳಲ್ಲಿ ವಾದ ಮಾಡಿದ್ದಾರೆ. * ರಾಷ್ಟ್ರೀಯ ನ್ಯಾಯಾಂಗ ನೇಮಕಾತಿ ಆಯೋಗಕ್ಕೆ ಸಂಬಂಧಿಸಿದ ಪ್ರಕರಣವನ್ನೂ ಅವರು ವಾದಿಸಿದರು.