Job Description: * ಭಾರತೀಯ ನೌಕಾಪಡೆಯ ಪ್ರಾಜೆಕ್ಟ್ 17ಎ ಅಡಿ ನಿರ್ಮಾಣಗೊಂಡಿರುವ ಮೂರನೇ ರಹಸ್ಯ ಯುದ್ಧನೌಕೆ “ತಾರಾಗಿರಿ”ಯನ್ನು ಭಾನುವಾರ ಮುಂಬೈನಲ್ಲಿ ಅನಾವರಣಗೊಳಿಸಲಾಗಿದೆ.* ನೀಲಗಿರಿ ಶ್ರೇಣಿಯ ನೌಕೆಗಳಲ್ಲಿ ಇದು ಮೂರನೇ ರಹಸ್ಯ ಯುದ್ಧನೌಕೆಯಾಗಿದೆ.* ನೌಕಾಪಡೆಯ ಆಂತರಿಕ ವಿನ್ಯಾಸ ವಿಭಾಗವಾದ ಬ್ಯೂರೋ ಆಫ್ ನೇವಲ್‌ ಡಿಸೈನ್‌ “ತಾರಾಗಿರಿ”ಯ ವಿನ್ಯಾಸವನ್ನು ಮಾಡಿದೆ.* ನೌಕಾಪಡೆಯ 25,700 ಕೋಟಿ ರೂ. ಮೊತ್ತದ “ಪ್ರಾಜೆಕ್ಟ್ 17 ಯೋಜನೆಯ ಅಡಿ ಇದನ್ನು ನಿರ್ಮಿಸಲಾಗುತ್ತಿದ್ದು, ಈ ತಾರಾಗಿರಿ ಯುದ್ಧನೌಕೆಯ ತೂಕ ಅಂದಾಜು 3510 ಟನ್ ನಷ್ಟಿದೆ. * ಈ ತಾರಾಗಿರಿ ಯುದ್ಧನೌಕೆಯ ಉದ್ದ 149.02 ಮೀ ಮತ್ತು ಅಗಲ 17.8 ಮೀ ಇದೆ.