Job Description: * ಬ್ರಿಟನ್ನಿನ ಇತಿಹಾಸದಲ್ಲಿ ಅತಿ ಹೆಚ್ಚು ಕಾಲ ರಾಣಿಯಾದ ಹಿರಿಮೆ ಹೊಂದಿದ್ದ, ರಾಣಿ ಎರಡನೇ ಎಲಿಜಬೆತ್ ಅವರು ತಮ್ಮ 96 ನೇ ವಯಸ್ಸಿನಲ್ಲಿ ಇತ್ತೀಚೆಗೆ ನಿಧನರಾದರು.* ರಾಣಿಗೆ ಇರುವ ನಾಲ್ಕು ಮಕ್ಕಳ ಪೈಕಿ ಹಿರಿಯ ಮಗ ಹಾಗೂ ವೇಲ್ಸ್ ನ ರಾಜಕುಮಾರರಾಗಿರುವ 73 ವರ್ಷದ ಚಾರ್ಲ್ಸ್ ಅವರು ತಕ್ಷಣದಿಂದ ಅನ್ವಯವಾಗುವಂತೆ ರಾಜರಾಗಿ ಕರ್ತವ್ಯ ನಿರ್ವಹಿಸಲಿದ್ದಾರೆ.* ರಾಣಿಯ ಗೌರವಾರ್ಥವಾಗಿ ಬ್ರಿಟನ್ ನಲ್ಲಿ ಹತ್ತು ದಿನಗಳ ರಾಷ್ಟ್ರೀಯ ಶೋಕಾಚರಣೆ ಘೋಷಿಸಲಾಗಿದೆ.* ಭಾರತದ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ವಿಶ್ವದಾದ್ಯಂತ ಅನೇಕ ಗಣ್ಯರು ಎಲಿಜಿಬೆತ್ ಅವರ ನಿಧನಕ್ಕೆ ಸಂತಾಪವನ್ನು ಸೂಚಿಸಿದ್ದಾರೆ.