Job Description: * ಭಾರತ ವಿಶ್ವದ ಐದನೇ ಅತಿದೊಡ್ಡ ಆರ್ಥಿಕತೆ ದೇಶವಾಗಿದೆ. ಬ್ರಿಟನ್ ಮತ್ತು ಪ್ರಾನ್ಸ್ ದೇಶಗಳನ್ನ ಹಿಂದಿಕ್ಕಿ ಭಾರತವು ಐದನೇ ಆರ್ಥಿಕತೆಯ ದೇಶವಾಗಿ ಹೊರಹೊಮ್ಮಿದೆ.* ಪ್ರಸ್ತುತ ವಿಶ್ವ ದೊಡ್ಡ ಆರ್ಥಿಕತೆ ಹೊಂದಿದ ದೇಶಗಳ ಪೈಕಿ ಅಮೆರಿಕಾ, ಚೀನಾ, ಜಪಾನ್, ಜರ್ಮನಿ ನಂತರದ ಸ್ಥಾನದಲ್ಲಿ ಭಾರತ ಇದೆ.* ವಿಶ್ವದ ಆರ್ಥಿಕತೆಯಲ್ಲಿ ಭಾರತಕ್ಕಿಂತಲೂ ಬ್ರಿಟನ್ ಹಿಂದೆ ಇದ್ದು, ಆರನೇ ಸ್ಥಾನಕ್ಕೆ ಕುಸಿದಿದೆ.* ಭಾರತೀಯ ಆರ್ಥಿಕತೆಯನ್ನು ಡಾಲರ್ ಮೌಲ್ಯದ ದರದಲ್ಲಿ ಲೆಕ್ಕ ಹಾಕಿದಾಗ 854.7 ಬಿಲಿಯನ್ ಡಾಲರ್ ಆಗಿದ್ದು, ಬ್ರಿಟನ್ ಆರ್ಥಿಕತೆ 816 ಬಿಲಿಯನ್ ಡಾಲರ್ ಆಗಿದೆ ಎಂದು ವರದಿಯಲ್ಲಿ ಪ್ರಕಟಿಸಲಾಗಿದೆ.* 2014 ರಿಂದ ದೇಶವು 10 ನೇ ಸ್ಥಾನದಲ್ಲಿದ್ದ ಭಾರತವು ಪ್ರಸ್ತುತ ಐದನೇ ಅತಿದೊಡ್ಡ ಆರ್ಥಿಕತೆಯ ಸ್ಥಾನದಲ್ಲಿದೆ. "2014 ರಿಂದ ಭಾರತವು ಅನುಸರಿಸುತ್ತಿರುವ ಹಾದಿಯು 2029 ರ ವೇಳೆಗೆ ದೇಶವು ಮೂರನೇ ಅತಿದೊಡ್ಡ ಆರ್ಥಿಕತೆಯ ಟ್ಯಾಗ್ ಪಡೆಯುವ ಸಾಧ್ಯತೆ ಇದೆ.