Job Description: * ಕರ್ನಾಟಕ ವೈಮಾನಿಕ ಮತ್ತು ರಕ್ಷಣಾ ನೀತಿಯಿಂದಾಗಿ ಕರ್ನಾಟಕ ಮುಂದಿನ 5 ವರ್ಷಗಳಲ್ಲಿ ಕರ್ನಾಟಕ ವೈಮಾನಿಕ ಮತ್ತು ರಕ್ಷಣಾ ಉದ್ಯಮ ಕ್ಷೇತ್ರದಲ್ಲೂ ದೇಶದಲ್ಲಿಯೇ ನಂ.1 ಸ್ಥಾನಕ್ಕೇರುವ ಉದ್ದೇಶದಿಂದ ಈ ನೀತಿಯನ್ನು ರೂಪಿಸಿದೆ. * ಈ ಹೊಸ ನೀತಿಯಿಂದಾಗಿ ಕರ್ನಾಟಕದಲ್ಲಿ ಮುಂದಿನ ದಿನಗಳಲ್ಲಿ 45 ಸಾವಿರ ಕೋಟಿ ಹೂಡಿಕೆ ಆಗಲಿದ್ದು, 60 ಸಾವಿರಕ್ಕೂ ಉದ್ಯೋಗಗಳು ಸೃಷ್ಟಿಯಾಗಲಿವೆ .* ಬಂಡವಾಳ ಹೂಡಿಕೆ ಉದ್ಯಮಿಗಳಿಗೆ ಉತ್ತೇಜನ ನೀಡುವುದು, ಸಹಾಯಧನ, ವಿದ್ಯುತ್ ತೆರಿಗೆ ವಿನಾಯಿತಿ, ಮುದ್ರಾಂಕ ಶುಲ್ಕ ರಿಯಾಯಿತಿ ಮತ್ತು ನೋಂದಣಿ ಶುಲ್ಕವನ್ನು ರಿಯಾಯಿತಿಗಳನ್ನು ನೀಡಲಾಗುವುದು ಎಂದು ಎಂದು ಸರಕಾರ ತಿಳಿಸಿದೆ.* ಭಾರತದ 25% ದರಷ್ಟು ವಿಮಾನ ಬಾಹ್ಯಾಕಾಶ ನೌಕೆಗಳ ನಿರ್ಮಾಣಕ್ಕೆ ಸಂಬಂಧಿಸಿದಂತೆ ಉದ್ಯಮಗಳು ರಾಜ್ಯದಲ್ಲಿ ನೆಲೆಗೊಂಡಿವೆ.* ಬೆಂಗಳೂರು 'ಕರ್ನಾಟಕ ಸಿಲಿಕಾನ್ ಸಿಟಿ' ಎಂದು ಗುರುತಿಸಲ್ಪಟ್ಟಿದೆ. ಐಟಿ ಮತ್ತು ಬಿಟಿ ಸಂಬಂಧಿತ ಸೇವೆಗಳು ಎಲೆಕ್ಟ್ರಾನಿಕ್ಸ್, ಹಾರ್ಡ್ ವೇರ್ ಗಳಲ್ಲಿ ಹಲವಾರು ಉನ್ನತ ಕಂಪನಿಗಳನ್ನು ಹೊಂದಿವೆ.