Job Description: * ನೋಯ್ಡಾದಲ್ಲಿ ಸೂಪರ್‌ಟೆಕ್ ಲಿಮಿಟೆಡ್‌ ಕಂಪನಿಯು ಎಮರಾಲ್ಡ್ ಕೋರ್ಟ್ ಆವರಣದಲ್ಲಿ ನಿಯಮ ಬಾಹಿರವಾಗಿ ನಿರ್ಮಿಸಿದ್ದ ಅವಳಿ ಗೋಪುರಗಳಾದ ಅಪೆಕ್ಸ್ ಮತ್ತು ಸೆಯಾನೆಗಳು ಈಗ ನೆಲಸಮವಾಗಿವೆ* ನೋಯ್ಡಾದ ಬೃಹತ್ ಅವಳಿ ಕಟ್ಟಡ ನೆಲಸಮವಾಗಿದೆ. 337 ಅಡಿ ಎತ್ತರದ ನೋಯ್ಡಾದ ಸೂಪರ್ಟೆಕ್ ಅವಳಿ ಕಟ್ಟಡಗಳ ನೆಲಸಮ ಜಾಗತಿಕ ಇತಿಹಾಸದಲ್ಲಿಯೇ ಅಪರೂಪದ ಕಾರ್ಯಾಚರಣೆ ಆಗಿದೆ. ಈಗಗನಚುಂಬಿ ಕಟ್ಟಡ ಕೇವಲ ಒಂಬತ್ತೇ ಸೆಕೆಂಡ್‌ಗಳಲ್ಲಿ ನಾಮಾವಶೇಷವಾಗಿದೆ* ನೋಯ್ಡಾದಲ್ಲಿ ನಿಯಮ ಬಾಹಿರವಾಗಿ ನಿರ್ಮಿಸಿದ್ದ ಅವಳಿ ಗೋಪುರಗಳನ್ನು ಕೆಡವಿದ ಕಾರಣ ರಿಯಾಲ್ಟಿ ಸಂಸ್ಥೆಯಾದ ಸೂಪರ್‌ಟೆಕ್ ಲಿಮಿಟೆಡ್‌ಗೆ ನಿರ್ಮಾಣ ಮತ್ತು ಬಡ್ಡಿ ವೆಚ್ಚ ಸೇರಿದಂತೆ 500 ಕೋಟಿರೂಪಾಯಿ ನಷ್ಟವಾಗಿದೆ ಎಂದು ಕಂಪನಿಯ ಅಧ್ಯಕ್ಷ ಆರ್.ಕೆ. ಅರೋರಾ ತಿಳಿಸಿದ್ದಾರೆ.* ಈ ಕಾರ್ಯಾಚರಣೆಯಲ್ಲಿ 3,700 ಕೆ.ಜಿಗೂ ಹೆಚ್ಚು ಸ್ಫೋಟಕಗಳನ್ನು ಬಳಸಲಾಗಿದೆ. ಈ ಕಟ್ಟಡವನ್ನು ಕೆಡವಿದ ವೆಚ್ಚವೇ ಸುಮಾರು 20 ಕೋಟಿ ಎಂದು ಅಂದಾಜಿಸಲಾಗಿದೆ.* ಅಪಾರ್ಟ್‌ಮೆಂಟ್‌ಗಳ ಪ್ರಸ್ತುತ ಮಾರುಕಟ್ಟೆ ಮೌಲ್ಯ 700 ಕೋಟಿ ರೂಪಾಯಿ ಎಂದು ಅಂದಾಜಿಸಲಾಗಿದೆ.