Job Description: * ನಬಾರ್ಡ್ ಮತ್ತು ರಾಯಚೂರಿನ ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯ (ಯುಎಎಸ್)ಗಳಿಂದ ಜಂಟಿಯಾಗಿ 2022 ರ ಆಗಸ್ಟ್ 26 ಮತ್ತು 27 ರಂದು " ಸಿರಿಧಾನ್ಯಗಳ ಅನೇಕ ದಿಗ್ಗಜರನ್ನು ರೂಪಿಸುವುದು - ಅನೇಕ ಸಿರಿಧಾನ್ಯ ಉದ್ಯಮಿಗಳನ್ನು ರೂಪಿಸುವುದು” ಎಂಬ ಧ್ಯೇಯವಾಕ್ಯದೊಂದಿಗೆ ಸಿರಿಧಾನ್ಯಗಳ ಕುರಿತು 2 ದಿನಗಳ ಸಮಾವೇಶ ಆಯೋಜನೆ* ಕೇಂದ್ರ ಹಣಕಾಸು ಸಚಿವರಿಂದ ರಾಯಚೂರಿನ ಯುಎಎಸ್ ಗೆ ಗ್ರಾಮೀಣ ಮೂಲಸೌಕರ್ಯ ಅಭಿವೃದ್ಧಿ ನಿಧಿ (ಆರ್ಐ ಡಿಎಫ್) ಅಡಿಯಲ್ಲಿ ನಬಾರ್ಡ್ ನಿಂದ 25 ಕೋಟಿ ರೂ. ಹಣಕಾಸು ನೆರವು ಘೋಷಣೆ.* ರೈತರು, ಮಹಿಳಾ ಸ್ವಸಹಾಯ ಸಂಘಗಳು, ಎಫ್ಪಿಒಗಳು, ವಿದ್ಯಾರ್ಥಿಗಳು, ಕೃಷಿ-ನವೋದ್ಯಮಗಳು, ವಿಜ್ಞಾನಿಗಳು, ಸಿರಿಧಾನ್ಯ ಸಂಸ್ಕರಣಾಗಾರರು, ನೀತಿ ನಿರೂಪಕರು, ಸರ್ಕಾರಿ ಅಧಿಕಾರಿಗಳು, ಬ್ಯಾಂಕರ್ ಗಳು ಮತ್ತು ಇತರ ಹಣಕಾಸು ಸಂಸ್ಥೆಗಳು ಸೇರಿದಂತೆ ಸುಮಾರು 1,000 ಪ್ರತಿನಿಧಿಗಳು ಕಾರ್ಯಕ್ರಮದಲ್ಲಿ ಸಕ್ರಿಯವಾಗಿ ಭಾಗವಹಿಸಿದ್ದರು.* * ಸಿರಿಧಾನ್ಯ ಸವಾಲು ಈ ಕೆಳಗಿನವುಗಳಿಗೆ ಮೂಲ ನಿಧಿ ಅನುದಾನವನ್ನು ನೀಡುತ್ತದೆ : -1. ಮೂವರು ವಿಜೇತರಿಗೆ ತಲಾ 1 ಕೋಟಿ ರೂ.2. ಆಯ್ಕೆಯಾದ 15 ಅಭ್ಯರ್ಥಿಗಳಿಗೆ 20 ಲಕ್ಷ ರೂ.3. ಆಯ್ಕೆಯಾದ ಇತರ 15 ಅಭ್ಯರ್ಥಿಗಳಿಗೆ 10 ಲಕ್ಷ ರೂ.