Job Description: * ಇತ್ತೀಚಿಗೆ ವಿದೇಶಾಂಗ ವ್ಯವಹಾರಗಳ ಸಚಿವ ಎಸ್ ಜೈಶಂಕರ್ ಅವರು ಪರಾಗ್ವೆಯಲ್ಲಿ ಮಹಾತ್ಮ ಗಾಂಧಿ ಪ್ರತಿಮೆ ಅನಾವರಣಗೊಳಿಸಿ, ಬಳಿಕ ಐತಿಹಾಸಿಕ ಕಾಸಾ ಡೆ ಲಾ ಇಂಡಿಪೆಂಡೆನ್ಸಿಯಾಕ್ಕೆ ಭೇಟಿ ನೀಡಿದರು.* ದಕ್ಷಿಣ ಅಮೆರಿಕಕ್ಕೆ ಭೇಟಿ ನೀಡಿರುವ ಕೇಂದ್ರ ವಿದೇಶಾಂಗ ವ್ಯವಹಾರಗಳ ಸಚಿವ ಎಸ್ ಜೈ ಶಂಕರ್ ಅವರು ಪರಾಗ್ವೆಯಲ್ಲಿ ಮಹಾತ್ಮ ಗಾಂಧಿ ಪ್ರತಿಮೆ ಅನಾವರಣಗೊಳಿಸಿದರು. * ನಗರದ ಪ್ರಮುಖ ಭಾಗದಲ್ಲಿ ಗಾಂಧಿ ಪ್ರತಿಮೆ ಸ್ಥಾಪಿಸಿರುವ ಅಸುನ್ಸಿಯಾನ್ ಪುರಸಭೆಯ ನಿರ್ಧಾರವನ್ನು ಅವರು ಶ್ಲಾಘಿಸಿದರು. * ಬಳಿಕ ಎರಡು ಶತಮಾನಗಳಿಗಿಂತ ಹಿಂದೆ ಪರಾಗ್ವೆಯ ಸ್ವಾತಂತ್ರ್ಯ ಚಳುವಳಿ ಪ್ರಾರಂಭವಾದ ಐತಿಹಾಸಿಕ ಕಾಸಾ ಡೆ ಲಾ ಇಂಡಿಪೆಂಡೆನ್ಸಿಯಾಕ್ಕೂ ಭೇಟಿ ಕೊಟ್ಟರು.* ಎಸ್ ಜೈಶಂಕರ್ ಅವರು ಆಗಸ್ಟ್ 22 ರಿಂದ 27 ರವರೆಗೆ ಬ್ರೆಜಿಲ್, ಪರಾಗ್ವೆ ಮತ್ತು ಅರ್ಜೆಂಟೀನಾ ಪ್ರವಾಸದಲ್ಲಿದ್ದಾರೆ. * ಈ ಭೇಟಿಯ ವೇಳೆ ಸ್ನೇಹ ಮತ್ತು ವಿದೇಶಾಂಗ ವ್ಯವಹಾರಗಳಿಗೆ ಸಂಬಂಧಿಸಿದಂತೆ ದ್ವಿಪಕ್ಷೀಯ ಮಾತುಕತೆ ನಡೆಸಿಲಿದ್ದಾರೆ.