Job Description: * ಬರ್ಮಿಂಗ್ ಹ್ಯಾಮ್ ನಲ್ಲಿ ನಡೆಯುತ್ತಿರುವ 2022 ರ ಕಾಮನ್ ವೆಲ್ತ್ ಕ್ರೀಡಾಕೂಟದಲ್ಲಿ ಭಾರತಕ್ಕೆ ಅನೇಕ ಪದಕಗಳು ಬಂದಿವೆ.* ಟೇಬಲ್ ಟೆನಿಸ್ ನ ಮಿಶ್ರ ಡಬಲ್ಸ್ ನಲ್ಲಿ ಶರತ್ ಕಮಲ್ ಮತ್ತು ಶ್ರೀಜಾ ಅಕುಲ ಚಿನ್ನದ ಪದಕ ಗೆದ್ದರು.* ಸಿ.ಡಬ್ಲ್ಯೂ.ಜಿ 2022 ಕ್ರೀಡಾಕೂಟದ ಬ್ಯಾಡ್ಮಿಂಟನ್ ನಲ್ಲಿ ಕಂಚಿನ ಪದಕ ಗೆದ್ದಿರುವ ಶ್ರೀಕಾಂತ್ ಕಿಡಂಬಿ. ಈ ಕ್ರೀಡಾಕೂಟದಲ್ಲಿ ಇವರಿಗೆ ಸಂದ ನಾಲ್ಕನೇ ಪದಕವಾಗಿದೆ.* ಮಹಿಳಾ ಟಿ 20 ಕ್ರಿಕೆಟ್‌ ಫೈನಲ್‌ಗೆ ಭಾರತ. ಸೆಮಿಯಲ್ಲಿ ಇಂಗ್ಲೆಂಡ್ ಎದುರು 4 ರನ್‌ಗಳ ಜಯವನ್ನು ಸಾಧಿಸಿದೆ.* ಮಹಿಳೆಯರ 50 ಕೆ.ಜಿ. ವಿಭಾಗದ ಕುಸ್ತಿಯಲ್ಲಿ ಭಾರತದ ಪೂಜಾ ಗೆಹಲೋತ್ ಗೆ ಕಂಚು.* ಮಹಿಳೆಯರ 60 ಕೆ.ಜಿ. ಬಾಕ್ಸಿಂಗ್‌ನಲ್ಲಿ ಜಾಸ್ಮಿನ್ ಲಂಬೊರಿಯಾ ಕಂಚಿನ ಪದಕವನ್ನು ಪಡೆದರು.* ಪುರುಷರ 57 kg ವಿಭಾಗದ ಫೈನಲ್ ನಲ್ಲಿ ರವಿ ಕುಮಾರ್ ಅವರು ರಲ್ಲಿ ನೈಜೀರಿಯಾದ ಎಬಿಕ್ವೆನಿಮೊ ವೆಲ್ಸನ್ ವಿರುದ್ಧ ಜಯಿಸಿ ಚಿನ್ನದ ಪದಕವನ್ನು ಪಡೆದರು.* ಭಾರತ ಪುರುಷರ ತಂಡದವರು ಲಾನ್ ಬಾಲ್ಸ್ ಸ್ಪರ್ಧೆಯ ಪೋರ್ಸ್ ವಿಭಾಗದಲ್ಲಿ ಬೆಳ್ಳಿ ಪದಕವನ್ನು ಗೆದ್ದರು.* ಈ ತಂಡದಲ್ಲಿ ಸುನಿಲ್ ಬಹಾದುರ್, ನವನೀತ್ ಸಿಂಗ್, ಚಂದನ್ ಕುಮಾರ್ ಸಿಂಗ್ ಮತ್ತು ದಿನೇಶ್ ಕುಮಾರ್ ಅವರು ಭಾಗವಹಿಸಿದ್ದರು. * ಲಾನ್ ಬಾಲ್ಸ್ ನಲ್ಲಿ ಭಾರತಕ್ಕೆ ದೊರೆತ ಎರಡನೇ ಪದಕ ಇದಾಗಿದೆ.* ಪ್ರಿಯಾಂಕಾ ಗೋ ಸ್ವಾಮಿ ಮತ್ತು ಅವಿನಾಶ್ ಸಬ್ಲೀ ಅವರು ಅಥ್ಲೆಟಿಕ್ಸ್ ನಲ್ಲಿ ಕ್ರಮವಾಗಿ ಮಹಿಳೆಯರ 20 km ನಡಿಗೆ ಹಾಗೂ ಪುರುಷರ 3000 m ಸ್ಟಿಫಲ್ ಚೇಸ್ ಸ್ಪರ್ಧೆಯಲ್ಲಿ ಬೆಳ್ಳಿ ಗೆದ್ದರು.* ಈ ನಡಿಗೆ ಸ್ಪರ್ಧೆಯಲ್ಲಿ ಪ್ರಿಯಾಂಕಾ 43 ನಿಮಿಷ. 38.83 ಸೆಕೆಂಡ್ ಗಳಲ್ಲಿ ಗುರಿ ತಲುಪಿ ಎರಡನೇ ಸ್ಥಾನ ಪಡೆದುಕೊಂಡರು.* ಕಾಮನ್ ವೆಲ್ತ್ ಕೂಟದ ನಡಿಗೆ ಸ್ಪರ್ಧೆಯಲ್ಲಿ ಪದಕ ಗೆದ್ದ ಭಾರತದ ಮೊದಲ ಮಹಿಳಾ ಅಥ್ಲೀಟ್ ಎಂಬ ಗೌರವ ಪ್ರಿಯಾಂಕಾ ಅವರಿಗೆ ಒಲಿಯಿತು. * ಅವಿನಾಶ್ ಸಬ್ಲೆ ಅವರು ಸ್ಟೀಪಲ್ ಚೇಸ್ ನಲ್ಲಿ 8 ನಿಮಿಷ. 11.20 ಸೆಕೆಂಡ್ ಗಳಲ್ಲಿ ಗುರಿ ತಲುಪಿ ಎರಡನೇ ಸ್ಥಾನ ಪಡೆದರು.