Job Description: * ಬರ್ಮಿಂಗ್ ಹ್ಯಾಮ್ ನಲ್ಲಿ ನಡೆಯುತ್ತಿರುವ ಕಾಮನ್ ವೆಲ್ತ್ ಕ್ರೀಡಾಕೂಟದಲ್ಲಿ ವೇಯ್ಟ್ ಲಿಫ್ಟರ್ ಅಚಿಂತ ಶಿವಲಿ ಚಿನ್ನದ ಪದಕ ಗೆದ್ದುಕೊಂಡರು.* ಬರ್ಮಿಂಗ್ ಹ್ಯಾಮ್ ನಲ್ಲಿ ನಡೆಯುತ್ತಿರುವ ಕಾಮನ್ ವೆಲ್ತ್ ಕ್ರೀಡಾಕೂಟದಲ್ಲಿ ಭಾರತಕ್ಕೆ ಈವರೆಗೆ ಒಟ್ಟು ಮೂರು ಚಿನ್ನದ ಪದಕ ಬಂದಂತಾಯಿತು.* ಅಚಿಂತ ಶಿವಲಿ ಪುರುಷರ 73 ಕೆಜಿ ವಿಭಾಗದಲ್ಲಿ ಒಟ್ಟು 313 ಕೆಜಿ ಭಾರ ಎತ್ತುವ ಮೂಲಕ ಚಿನ್ನಕ್ಕೆ ಕೊರಳೊಡ್ಡಿದರೆ.* ಸ್ನ್ಯಾಚ್‌ನಲ್ಲಿ 143 ಕೆಜಿ ಮತ್ತು ಕ್ಲೀನ್ ಮತ್ತು ಜರ್ಕ್‌ನಲ್ಲಿ 170 ಕೆಜಿ ಎತ್ತುವ ಮೂಲಕ ಅಗ್ರಸ್ಥಾನಕ್ಕೇರಿದರು.* ಮಲೇಷ್ಯಾದ ಎರ್ರಿ ಹಿದಾಯತ್ ಮುಹಮ್ಮದ್ ಅವರು ಒಟ್ಟು 303 ಕೆಜಿಯೊಂದಿಗೆ ಬೆಳ್ಳಿ ಪಡೆದರೆ, ಕೆನಡಾದ ಎಸ್. ಡಾರ್ಸಿಗ್ನಿ ಒಟ್ಟು 298 ಕೆಜಿಯೊಂದಿಗೆ ಕಂಚಿನ ಪದಕ ಪಡೆದರು.