Job Description: * ಜುಲೈ 29 ರಂದು ಅಂತಾರಾಷ್ಟ್ರೀಯ ಹುಲಿ ದಿನ (International tiger day 2022)ವನ್ನು ಆಚರಿಸಲಾಗುತ್ತದೆ. * ಜಗತ್ತಿನ ಜನಪ್ರಿಯ ವನ್ಯಜೀವಿ ಹುಲಿ ಇದು ಭಾರತದ ರಾಷ್ಟ್ರೀಯ ಪ್ರಾಣಿಯೂ ಆಗಿದೆ. * ಪ್ರತಿ ವರ್ಷ ಅಂತಾರಾಷ್ಟ್ರೀಯ ಹುಲಿ ದಿನವನ್ನು ಒಂದು ಆಚರಿಸಲಾಗುತ್ತದೆ. * ಈ ವರ್ಷ “India launches Project Tiger to revive the tiger population” ಎಂಬ ಘೋಷವಾಕ್ಯದೊಂದಿಗೆ(ಥೀಮ್‌) ಹುಲಿ ದಿನವನ್ನು ಆಚರಿಸಲಾಗುತ್ತದೆ. * ನೂರಾರು ವರ್ಷಗಳ ಹಿಂದೆ 1 ಲಕ್ಷಕ್ಕೂ ಹೆಚ್ಚು ಹುಲಿಗಳು ಕಾಡುಗಳಲ್ಲಿ ಓಡಾಡಿಕೊಂಡಿದ್ದವು. ಆದರೆ, ಈಗ ಅವುಗಳು ಕೆಲವೇ ಸಾವಿರ ಸಂಖ್ಯೆಯಲ್ಲಿ ಇವೆ. * 2016 ರ ಜಾಗತಿಕ ಹುಲಿ ಗಣತಿಯಂತೆ ಈಗ ಉಳಿದಿರುವ ಹುಲಿಗಳ ಸಂಖ್ಯೆ ಸುಮಾರು 3890. ಈ ಪೈಕಿ ಭಾರತ ಉಪಖಂಡದಲ್ಲಿ ಸುಮಾರು 2 ಸಾವಿರ ಹುಲಿಗಳು ಇದ್ದವು. 2019 ರ ಹುಲಿ ಗಣತಿಯ ಪ್ರಕಾರ, ಭಾರತದಲ್ಲಿ ಒಟ್ಟು 2,967 ಹುಲಿಗಳಿವೆ. ಅವುಗಳಲ್ಲಿ 526 ಹುಲಿಗಳು ಮಧ್ಯಪ್ರದೇಶದಲ್ಲಿವೆ. * ಕರ್ನಾಟಕದಲ್ಲಿ 524 ಹುಲಿಗಳಿದ್ದು, ದೇಶದಲ್ಲೇ ಹುಲಿಗಳ ಸಂಖ್ಯೆಯಲ್ಲಿ ಎರಡನೇ ಸ್ಥಾನದಲ್ಲಿದೆ. ಕೆಲ ವರ್ಷಗಳಲ್ಲಿ ಹೊಸ ಮರಿಗಳು ಜನಿಸಿದಾಗ ಕರ್ನಾಟಕ ಅಗ್ರಸ್ಥಾನಕ್ಕೂ ಏರಿದೆ. ಇನ್ನೊಂದೆಡೆ ಉತ್ತರಾಖಂಡದಲ್ಲಿ 442 ಹುಲಿಗಳಿವೆ. * 2016 ಗಣತಿಗೆ ಹೋಲಿಸಿದರೆ ಈಗ ಹುಲಿಗಳ ಸಂಖ್ಯೆ ಏರಿಕೆ ಕಾಣುತ್ತಿರುವುದು ಖುಷಿಯ ವಿಷಯವಾದರೂ ಹುಲಿಗಳ ರಕ್ಷಣೆಗೆ ಇನ್ನಷ್ಟು ಕ್ರಮಗಳ ಅಗತ್ಯವಿದೆ. * 1987 ರಲ್ಲಿ ಹುಲಿಗಳ ಅಕ್ರಮ ಬೇಟೆಯನ್ನು ನಿಷೇಧಿಸಿದ್ದರೂ ತೆರೆಮರೆಯಲ್ಲಿ ಹುಲಿಗಳ ಬೇಟೆ ನಿರಾಂತಕವಾಗಿ ನಡೆಯುತ್ತಿದೆ. * ದೇಶದಲ್ಲಿ 2,967 ಹುಲಿಗಳಿವೆ * 2018 ರಲ್ಲಿ, ಪರಿಸರ ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯ (MoEF&CC) ಬಿಡುಗಡೆ ಮಾಡಿದ ಅಖಿಲ ಭಾರತ ಅಂದಾಜು ವರದಿಯಲ್ಲಿ, ಕರ್ನಾಟಕವು 524 ಹುಲಿಗಳೊಂದಿಗೆ ದೇಶದಲ್ಲಿ ಎರಡನೇ ಸ್ಥಾನದಲ್ಲಿದೆ, ಮಧ್ಯಪ್ರದೇಶ (526) ಪ್ರಥಮ ಸ್ಥಾನದಲ್ಲಿದೆ. * 2010 ರ ಹೊತ್ತಿಗೆ, ಜಾಗತಿಕ ಹುಲಿ ಜನಸಂಖ್ಯೆಯು ಸಾರ್ವಕಾಲಿಕ ಕನಿಷ್ಠ 3200 ಕ್ಕೆ ಇಳಿದಿದೆ. * 2010 ರಲ್ಲಿ ರಷ್ಯಾದ ಸೇಂಟ್ ಪೀಟರ್ಸ್ಬರ್ಗ್ ಹುಲಿ ಶೃಂಗಸಭೆಯಲ್ಲಿ ಮೊದಲ ಬಾರಿಗೆ ಜಾಗತಿಕ ಹುಲಿ ದಿನವನ್ನು ಪ್ರಸ್ತಾಪಿಸಲಾಯಿತು. * ಸೇಂಟ್ ಪೀಟರ್ಸ್‌ಬರ್ಗ್ ಶೃಂಗಸಭೆಯಲ್ಲಿ, 2022 ರ ವೇಳೆಗೆ ಹುಲಿಗಳ ಸಂಖ್ಯೆಯನ್ನು ದ್ವಿಗುಣಗೊಳಿಸುವ ನಿರ್ಣಯಕ್ಕೆ ದೇಶಗಳು ಒಪ್ಪಿಕೊಂಡವು, ಇದು ಚೀನಾದ ಹುಲಿ ವರ್ಷವೂ ಆಗಿದೆ.