Job Description: * ಭಾರತೀಯ ಯುವಕರಿಗೆ ಸಶಸ್ತ್ರ ಪಡೆಗಳಲ್ಲಿ ಸೇವೆ ಸಲ್ಲಿಸುವ ಆಕರ್ಷಕ ನೇಮಕಾತಿ ಯೋಜನೆಗೆ ಕೇಂದ್ರ ಸಚಿವ ಸಂಪುಟವು ಇಂದು ಅನುಮೋದನೆ ನೀಡಿದೆ. ಈ ಯೋಜನೆಯನ್ನು ಅಗ್ನಿಪಥ್ ಎಂದು ಮತ್ತು ಈ ಯೋಜನೆಯಡಿ ಆಯ್ಕೆಯಾದ ಯುವಕರನ್ನು ಅಗ್ನಿವೀರ್ ಎಂದು ಕರೆಯಲಾಗುತ್ತದೆ* ದೇಶದ 10 ಲಕ್ಷ ಜನರಿಗೆ ಒಂದೂವರೆ ವರ್ಷಗಳಲ್ಲಿ ಉದ್ಯೋಗ ಒದಗಿಸುವುದಾಗಿ ಕೇಂದ್ರ ಸರ್ಕಾರ ಘೋಷಣೆ ಮಾಡಿದೆ * ಇದು ಸಶಸ್ತ್ರ ಪಡೆಗಳ ಯುವಜನರ ಸಂಖ್ಯೆಯನ್ನು ಹೆಚ್ಚಿಸುತ್ತದೆ ಮತ್ತು 'ಜೋಶ್' ಮತ್ತು 'ಜಜ್ಬಾ' ಗೆ ಹೊಸ ಹುರುಪು ನೀಡುತ್ತದೆ. ಹಾಗೆಯೇ, ಸಶಸ್ತ್ರ ಪಡೆಗಳ ತಂತ್ರಜ್ಞಾನದಲ್ಲಿ ಸದಯದ ಅಗತ್ಯವಾಗಿರುವ ಪರಿವರ್ತನೆಯ ಬದಲಾವಣೆಯನ್ನು ತರುತ್ತದೆ.* ಈ ಯೋಜನೆಯ ಅನುಷ್ಠಾನದಿಂದ ಭಾರತೀಯ ಸಶಸ್ತ್ರ ಪಡೆಗಳ ಯೋಧರ ಸರಾಸರಿ ವಯಸ್ಸು ಸುಮಾರು 4-5 ವರ್ಷಗಳು ಕಡಿಮೆಯಾಗಲಿದೆ.* ಅಗ್ನಿವೀರರಿಗೆ ಮೂರು ಸೇವೆಗಳಲ್ಲಿ ಅನ್ವಯವಾಗುವಂತೆ ಅಪಾಯ ಮತ್ತು ಕಷ್ಟದ ಭತ್ಯೆಗಳೊಂದಿಗೆ ಆಕರ್ಷಕ ಮಾಸಿಕ ಪ್ಯಾಕೇಜ್ ಅನ್ನು ನೀಡಲಾಗುತ್ತದೆ* ‘ಸೇವಾನಿಧಿ’ಗೆ ಆದಾಯ ತೆರಿಗೆಯಿಂದ ವಿನಾಯಿತಿ ಇರುತ್ತದೆ. ಗ್ರಾಚ್ಯುಟಿ ಮತ್ತು ಪಿಂಚಣಿ ಪ್ರಯೋಜನಗಳಿಗೆ ಯಾವುದೇ ಅರ್ಹತೆ ಇರುವುದಿಲ್ಲ. ಅಗ್ನಿವೀರರಿಗೆ ಭಾರತೀಯ ಸಶಸ್ತ್ರ ಪಡೆಗಳಲ್ಲಿ ಅವರ ಸೇವಾ ಅವಧಿಗೆ ರೂ 48 ಲಕ್ಷಗಳ ಕೊಡುಗೆ ರಹಿತ ಜೀವ ವಿಮಾ ರಕ್ಷಣೆಯನ್ನು ಒದಗಿಸಲಾಗುತ್ತದೆ.* ರಾಷ್ಟ್ರಕ್ಕೆ ಸೇವೆ ಸಲ್ಲಿಸುವ ಈ ಅವಧಿಯಲ್ಲಿ, ಅಗ್ನಿವೀರರಿಗೆ ವಿವಿಧ ಮಿಲಿಟರಿ ಕೌಶಲ್ಯ ಮತ್ತು ಅನುಭವ, ಶಿಸ್ತು, ದೈಹಿಕ ಸಾಮರ್ಥ್ಯ, ನಾಯಕತ್ವದ ಗುಣಗಳು, ಧೈರ್ಯ ಮತ್ತು ದೇಶಪ್ರೇಮವನ್ನು ಪಡೆಯಲಿದ್ದಾರೆ. ನಾಲ್ಕು ವರ್ಷಗಳ ಈ ಅವಧಿಯ ನಂತರ, ಅಗ್ನಿವೀರರನ್ನು ನಾಗರಿಕ ಸಮಾಜಕ್ಕೆ ಸೇರುತ್ತಾರೆ.* ಸರಿಸುಮಾರು 11.71 ಲಕ್ಷ ರೂ.ಗಳ ಸೇವಾ ನಿಧಿಯು ಸಾಮಾನ್ಯವಾಗಿ ಸಮಾಜದ ಆರ್ಥಿಕವಾಗಿ ವಂಚಿತ ಸ್ತರಗಳ ಯುವಜನರಿಗೆ ಇರುವ ಹಣಕಾಸಿನ ಒತ್ತಡವಿಲ್ಲದೆ ಭವಿಷ್ಯದ ಕನಸುಗಳನ್ನು ಮುಂದುವರಿಸಲು ಅಗ್ನಿವೀರ್‌ಗೆ ಸಹಾಯ ಮಾಡುತ್ತದೆ.* * ಅನುಕೂಲಗಳು : - ಸಶಸ್ತ್ರ ಪಡೆಗಳ ನೇಮಕಾತಿ ನೀತಿಯಲ್ಲಿ ಪರಿವರ್ತಕ ಸುಧಾರಣೆ.- ದೇಶಕ್ಕೆ ಸೇವೆ ಸಲ್ಲಿಸಲು ಮತ್ತು ರಾಷ್ಟ್ರ ನಿರ್ಮಾಣಕ್ಕೆ ಕೊಡುಗೆ ನೀಡಲು ಯುವಕರಿಗೆ ಒಂದು ಅನನ್ಯ ಅವಕಾಶ.- ಸಶಸ್ತ್ರ ಪಡೆಗಳು ಯುವ ಮತ್ತು ಕ್ರಿಯಾತ್ಮಕವಾಗುತ್ತವೆ.- ಅಗ್ನಿವೀರರಿಗೆ ಆಕರ್ಷಕ ಹಣಕಾಸು ಪ್ಯಾಕೇಜ್.- ಅತ್ಯುತ್ತಮ ಸಂಸ್ಥೆಗಳಲ್ಲಿ ತರಬೇತಿ ಪಡೆಯಲು ಮತ್ತು ತಮ್ಮ ಕೌಶಲ್ಯ ಮತ್ತು ಅರ್ಹತೆಗಳನ್ನು ಹೆಚ್ಚಿಸಿಕೊಳ್ಳಲು ಅಗ್ನಿವೀರರಿಗೆ ಅವಕಾಶ.- ನಾಗರಿಕ ಸಮಾಜದಲ್ಲಿ ಮಿಲಿಟರಿ ನೀತಿಯೊಂದಿಗೆ ಉತ್ತಮ ಶಿಸ್ತಿನ ಮತ್ತು ನುರಿತ ಯುವಕರ ಲಭ್ಯತೆ.- ಸಮಾಜಕ್ಕೆ ಮರಳುವವರಿಗೆ ಮರು-ಉದ್ಯೋಗ ಅವಕಾಶಗಳು ಮತ್ತು ಅವರು ಯುವಕರಿಗೆ ಮಾದರಿಯಾಗುತ್ತಾರೆ* ಅಗ್ನಿವೀರರು ಆಯಾ ವಿಭಾಗಗಳು/ವರ್ಗಗಳಿಗೆ ಅನ್ವಯವಾಗುವಂತೆ ಸಶಸ್ತ್ರ ಪಡೆಗಳಲ್ಲಿ ದಾಖಲಾತಿಗಾಗಿ ನಿಗದಿಪಡಿಸಿದ ವೈದ್ಯಕೀಯ ಅರ್ಹತೆಯ ಷರತ್ತುಗಳನ್ನು ಪೂರೈಸಬೇಕು. * ಅಗ್ನಿವೀರರ ಶೈಕ್ಷಣಿಕ ಅರ್ಹತೆಯು ವಿವಿಧ ವರ್ಗಗಳಲ್ಲಿ ದಾಖಲಾತಿಗಾಗಿ ಸದ್ಯದಲ್ಲಿರುವುದೇ ಮುಂದುವರೆಯುತ್ತದೆ.