Job Description: * ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರ ಅಧ್ಯಕ್ಷತೆಯ ಕೇಂದ್ರ ಸಚಿವ ಸಂಪುಟವು, 'ವೇ ಫೈಂಡಿಂಗ್ ಅಪ್ಲಿಕೇಶನ್' ಅನ್ನು ಜಿನೀವಾದಲ್ಲಿರುವ ಪಲೈಸ್ ಡೆಸ್ ನೇಷನ್ಸ್, ವಿಶ್ವಸಂಸ್ಥೆಯ ಕಚೇರಿಯಲ್ಲಿ (ಯುಎನ್‌ಒಜಿ) ಬಳಸಲು ಭಾರತ ಸರ್ಕಾರ ಮತ್ತು ವಿಶ್ವಸಂಸ್ಥೆಯ ನಡುವಿನ ಒಪ್ಪಂದಕ್ಕೆ ಸಹಿ ಹಾಕುವ ಪ್ರಸ್ತಾವನೆಯನ್ನು ಅನುಮೋದಿಸಿದೆ.* ವಿಶ್ವ ಸಂಸ್ಥೆಯು(ಯುಎನ್) 1945 ರಲ್ಲಿ ಸ್ಥಾಪಿಸಲಾದ ಅಂತರರಾಷ್ಟ್ರೀಯ ಸಂಸ್ಥೆಯಾಗಿದೆ. ಇದು ಪ್ರಸ್ತುತ 193 ಸದಸ್ಯ ರಾಷ್ಟ್ರಗಳನ್ನು ಒಳಗೊಂಡಿದೆ. * ಭಾರತವು ವಿಶ್ವಸಂಸ್ಥೆಯ ಸ್ಥಾಪಕ ಸದಸ್ಯವಾಗಿದೆ.* ಐದು ಕಟ್ಟಡಗಳು ಮತ್ತು 21 ಮಹಡಿಗಳನ್ನು ಒಳಗೊಂಡಿರುವ ಜಿನೀವಾದಲ್ಲಿರುವ ವಿಶ್ವಸಂಸ್ಥೆಯ ಕಚೇರಿ (ಯುಎನ್‌ಒಜಿ), ಐತಿಹಾಸಿಕ ಪಲೈಸ್ ಡೆಸ್ ನೇಷನ್ಸ್‌ನಲ್ಲಿದೆ. * ಇಂಟರ್ನೆಟ್ ಸಂಪರ್ಕದೊಂದಿಗೆ ಆಂಡ್ರಾಯ್ಡ್‌ ಮತ್ತು ಐಒಎಸ್‌ ಸಾಧನಗಳಲ್ಲಿ ಅಪ್ಲಿಕೇಶನ್ ಕಾರ್ಯನಿರ್ವಹಿಸುತ್ತದೆ. ಆ್ಯಪ್ ನ ಅಭಿವೃದ್ಧಿಯನ್ನು ಸೆಂಟರ್ ಫಾರ್ ಡೆವಲಪ್‌ಮೆಂಟ್ ಆಫ್ ಟೆಲಿಮ್ಯಾಟಿಕ್ಸ್ (ಸಿ-ಡಾಟ್) ಗೆ ವಹಿಸಲಾಗಿದೆ, ಇದು ಭಾರತ ಸರ್ಕಾರದ ದೂರಸಂಪರ್ಕ ಇಲಾಖೆಯ (ಸಿಒಟಿ) ಸ್ವಾಯತ್ತ ದೂರ ಸಂಪರ್ಕ ಸಂಶೋಧನೆ ಮತ್ತು ಅಭಿವೃದ್ಧಿ ಕೇಂದ್ರವಾಗಿದೆ.* 2020 ರಲ್ಲಿ 75 ನೇ ಸ್ವಾತಂತ್ರ್ಯದ ವಾರ್ಷಿಕೋತ್ಸವದ ಸಂದರ್ಭದಲ್ಲಿ 'ವೇ ಫೈಂಡಿಂಗ್ ಅಪ್ಲಿಕೇಶನ್' ಅಭಿವೃದ್ಧಿಯ ಯೋಜನೆಯನ್ನು ಭಾರತ ಸರ್ಕಾರದಿಂದ ವಿಶ್ವಸಂಸ್ಥೆಗೆ ದೇಣಿಗೆಯಾಗಿ ಪರಿಗಣಿಸಲಾಗಿದೆ. * ಅಪ್ಲಿಕೇಶನ್‌ನ ಅಭಿವೃದ್ಧಿ ನಿಯೋಜನೆ ಮತ್ತು ನಿರ್ವಹಣೆಗೆ ಅಂದಾಜು ವೆಚ್ಚವು 2 ದಶಲಕ್ಷ ಡಾಲರ್‌ ಆಗಿದೆ.