Job Description: * ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿರುವ ಕೇಂದ್ರ ಸಚಿವ ಸಂಪುಟವು ಜಪಾನ್‌ ಜೊತೆಗೆ ಒಪ್ಪಂದಕ್ಕೆ ಸಹಿ ಹಾಕಿದೆ.* ರಾಷ್ಟ್ರೀಯ ಪರಿಸರ ಅಧ್ಯಯನ ಸಂಸ್ಥೆ ಜಪಾನ್‌ ಹಾಗೂ ಆರ್ಯಭಟ ಸಂಶೋಧನಾ ಮತ್ತು ಗಮನ ವಿಜ್ಞಾನಗಳ ಸಂಸ್ಥೆಯ ನಡುವೆ ಒಪ್ಪಂದಕ್ಕೆ ಭಾರತ ಸರ್ಕಾರವು ಸಹಿ ಹಾಕಿದೆ.* ಹವಾಮಾನ ಬದಲಾವಣೆ ಹಾಗೂ ಗುಣಮಟ್ಟದ ಗಾಳಿಯ ಕುರಿತು ಜಂಟಿ ಅಧ್ಯಯನ ಮಾಡಲು ವೃತ್ತಿರನಿರತರ ಸಮಿತಿ ರಚನೆಗೆ ಈ ಒಪ್ಪಂದ ಏರ್ಪಟ್ಟಿದೆ* ಈ ಸಂಸ್ಥೆಗಳು ಈ ಕೆಳಗಿನ ಕೆಲವು ಚಟುವಟಿಕೆಗಳನ್ನು ಕೈಗೊಳ್ಳಲಿವೆ1) ವೈಜ್ಞಾನಿಕ ಉಪಕರಣಗಳ ಜಂಟಿ ಬಳಕೆ ಮತ್ತು ಕಾರ್ಯಾಚರಣೆ2) ಸಂಶೋಧನೆಯ ವಿಧಾನಗಳಲ್ಲಿ ವೈಜ್ಞಾನಿಕ ಮತ್ತು ತಂತ್ರಜ್ಞಾನ ಮಾಹಿತಿಯ ವಿನಿಮಯ3) ಅವಲೋಕಿಸಿದ, ಅಧ್ಯಯಿಸಿದ ವಿಷಯಗಳ ಜಂಟಿ ವಿಶ್ಲೇಷಣೆ ಮತ್ತು ವೈಜ್ಞಾನಿಕ ವರದಿಗಳ ತಯಾರಿಕೆ4) ಜಂಟಿಯಾಗಿ ಶೈಕ್ಷಣಿಕ ಮತ್ತು ಸಂಶೋಧನಾ ಚಟುವಟಿಕೆಗಳು5) ಸಂಶೋಧನೆಗಾಗಿ ಪಿಎಚ್‌ಡಿ ವಿದ್ಯಾರ್ಥಿಗಳು ಹಾಗೂ ಸಂಶೋಧಕರ ವಿನಿಮಯ ಕಾರ್ಯಕ್ರಮ.* ದತ್ತಾಂಶ ಮಾಹಿತಿ ಸಂಗ್ರಹ, ವಿಶ್ಲೇಷಣೆ, ವೈಜ್ಞಾನಿಕವಾಗಿ ಪರಿಸರ ಮಾದರಿಗಳ ಸಂಗ್ರಹ ಮಾಡುತ್ತದೆ. ಸಂಶ್ಲೇಶಣೆ, ಸಮಗ್ರ, ವಿಕಾಸ ಹಾಗೂ ನೆಟ್ ವರ್ಕ್‌ ಎಂಬ ನಾಲ್ಕು ಮೂಲ ಅಂಶಗಳನ್ನಿರಿಸಿಕೊಂಡು ತನ್ನ ಧ್ಯೇಯೋದ್ದೇಶಗಳಿಗಾಗಿ ಶ್ರಮಿಸುತ್ತಿದೆ.