Job Description: * ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಸಚಿವ ಹರ್‌ದೀಪ್ ಸಿಂಗ್ ಪುರಿ ಇಂಡಿಯಾ ವಸ್ತು ಪ್ರದರ್ಶನದಲ್ಲಿ ಭಾರತ್ ಟ್ಯಾಪ್ ಉಪಕ್ರಮಕ್ಕೆ ಚಾಲನೆ ನೀಡಿದ್ದರು.* ಜಲ ಬಳಕೆಯಲ್ಲಿ ಮಿತವ್ಯಯ ಸಾಧಿಸಲು ಉಪಕ್ರಮದ ಉದ್ದೇಶವಾಗಿದೆ. ಮೂಲದಲ್ಲೇ ಕಡಿಮೆ ನೀರು ಬಳಕೆಯಾಗುವ ರೀತಿಯ ನಲ್ಲಿ ( ಟ್ಯಾನ್ ) ಮತ್ತು ಸ್ಯಾನಿಟರಿವೇರ್‌ಗಳನ್ನು ದೊಡ್ಡ ಪ್ರಮಾಣದಲ್ಲಿ ಒದಗಿಸುವುದು ಈ ಯೋಜನೆಯ ಗುರಿಯಾಗಿದೆ.* ನೀರು ಉಳಿತಾಯವಾಗುವುದರಿಂದ ಪಂಪಿಂಗ್ , ಸಾರಿಗೆ ಮತ್ತು ಶುದ್ದೀಕರಣ ಮುಂತಾದ ಚಟುವಟಿಕೆಗಳಿಗೆ ಅಗತ್ಯವಾದ ಇಂಧನ ಉಳಿತಾಯವೂ ಆಗುತ್ತದೆ.* ಭಾರತೀಯ ಮಾನಕಗಳ ಬ್ಯೂರೋ ( ಬಿಐಎಸ್ ) ಪ್ರಮಾಣೀಕೃತ ಜಲ - ದಕ್ಷತೆಯ ಪ್ಲಂಬಿಂಗ್ ಫಿಕ್ಟರ್‌ಗಳ ಬಳಕೆಯ ಉತ್ತೇಜನಕ್ಕೆ ಜನಜಾಗೃತಿ ಮೂಡಿಸುವುದು.* “ನಿರ್ಮಲ ಜಲ್ ಪ್ರಯಾಸ್" ಎಂಬ ಯೋಜನೆಗೂ ಕೇಂದ್ರ ಸಚಿವರು ಚಾಲನೆ ನೀಡಿದ್ದರು . ವರ್ಷಕ್ಕೆ 500 ಕೋಟಿ ಲೀಟರ್ ನೀರು ಉಳಿತಾಯ ಮಾಡುವುದು ಈ ಯೋಜನೆಯ ಗುರಿಯಾಗಿದೆ* ಪ್ಲಾಂಬಿಂಗ್ ಇಂಡಿಯಾ ಪ್ರದರ್ಶನ ಸೆಂಟಿಂಗ್, ನೀರು ಮತ್ತು ನೈರ್ಮಲ್ಯ ಉತ್ಪನ್ನ ಹಾಗೂ ಸೇವೆಗಳಿಗೆ ಸಂಬಂದಿಸಿದ ಭಾರತದ ವಸ್ತು ಪ್ರದರ್ಶನದ ಹೆಸರು ಪ್ಲಮ್ ಬೆಕ್ಸ್ ಇಂಡಿಯಾ ದೆಹಲಿಯ ಪ್ರಗತಿ ಮೈದಾನದಲ್ಲಿ ಪ್ರದರ್ಶನ ನಡೆಯಿತು.* ಇಂಡಿಯಾ ಪ್ರದರ್ಶನಕ್ಕೆ ಚಾಲನೆ ನೀಡಿ ಮಾತನಾಡಿದ ಸಚಿವ ನೈರ್ಮಲ್ಯವು ನಾಗರಿಕರು ನಿರೀಕ್ಷಿಸುವ ಸೇವೆಗಳಲ್ಲಿ ಅತಿ ಪ್ರಮುಖವಾದುದು ಎಂದು ಹೇಳಿದರು.