Job Description: * ಐಪಿಸಿ ಮುನ್ನೂರ 124ಎ ಸೆಕ್ಷನ್ ಕುರಿತ ಸುಪ್ರೀಂ ಕೋರ್ಟ್ ಗೆ ಪ್ರಮಾಣಪತ್ರ ಸಲ್ಲಿಸಿದ ಕೇಂದ್ರ ಸರಕಾರ, ದೇಶದ್ರೋಹ ಕಾನೂನು ಮರುಪರಿಶೀಲನೆ ಮಾಡಬೇಕೆಂದು ನಿರ್ಧರಿಸಲಾಗಿದೆ.* ಕೇಂದ್ರ ಸರಕಾರವು ಭಾರತೀಯ ದಂಡಸಂಹಿತೆ 124ಎ ವಿಧಿಯನ್ನು ಪರಿಶೀಲಿನೆ ನಡೆಸುವುದಾಗಿ ಸುಪ್ರೀಂಕೋರ್ಟ್ ಗೆ ತಿಳಿಸಿದೆ, 124ಎ ವಿಧಿಯನ್ನು ಸಂಪೂರ್ಣ ಮರುಪರಿಶೀಲಿಸಲು ಕೇಂದ್ರ ಸರ್ಕಾರ ಸಮಿತಿ ರಚಿಸಿದೆ ಎಂದು ಅಫಿಡವಿಟ್ ನಿಂದ ತಿಳಿಸಲಾಗಿದೆ.* ಈ ದೇಶದ ನಾಗರಿಕತೆ ಸ್ವಾತಂತ್ರ್ಯ ಮತ್ತು ಮಾನವ ಹಕ್ಕುಗಳ ಬಗ್ಗೆ ಚರ್ಚೆಗಳು ಆರಂಭವಾಗಿವೆ ದೇಶದ ಸಾರ್ವಭೌಮತೆ ಮತ್ತು ಏಕತೆಯನ್ನು ರಕ್ಷಿಸುಲು ಕೇಂದ್ರ ಸರಕಾರವು ಬದ್ಧವಾಗಿದೆ.* ಬ್ರಿಟಿಷರು ಬಳಸುತ್ತಿದ್ದ ಐಪಿಸಿ 124ಎ ಸೆಕ್ಷನ್ ಅನ್ನು ಈಗ ಪೋಲಿಸರು ವ್ಯಾಪಕವಾಗಿ ದುರ್ಬಳಕೆ ಮಾಡುತ್ತಿದ್ದಾರೆ ಎಂದು ಸುಪ್ರೀಂಕೋರ್ಟ್ ನ ಮುಖ್ಯ ನ್ಯಾಯಮೂರ್ತಿ ಎ ಎನ್ ವಿ ರಮಣ ಅವರು ಹೇಳಿದ್ದಾರೆ* ಅಟಾರ್ನಿ ಜನರಲ್ ಕೆ.ಕೆ ವೇಣುಗೋಪಾಲ್ ಅವರು ಕಾನೂನು ದುರ್ಬಳಕೆಯನ್ನು ತಡೆಯಲು ಹೊಸದಾಗಿ ಮಾರ್ಗಸೂಚಿನ್ನು ರೂಪಿಸಬಹುದು ಎಂದು ಕೋರ್ಟ್ ಗೆ ತಿಳಿಸಿದ್ದಾರೆ.