Job Description: * ಪ್ರಸ್ತುತ ಭಾರತ ಹಾಗೂ ಜರ್ಮನಿ ಉಭಯ ದೇಶಗಳ ನಡುವೆ ಹಸಿರು ಮತ್ತು ಸುಸ್ಥಿರ ಅಭಿವೃದ್ಧಿ ಪಾಲುದಾರಿಕೆಯ ಜಂಟಿ ಉದ್ದೇಶ ಘೋಷಣೆ ಅಡಿಯಲ್ಲಿ, 2030 ರವರೆಗೆ ಭಾರತಕ್ಕೆ 10 ಬಿಲಿಯನ್ ಯುರೋಗಳ ಹೊಸ ಹಾಗೂ ಹೆಚ್ಚುವರಿ ಅಭಿವೃದ್ಧಿ ನೆರವನ್ನು ನೀಡಲು ಜರ್ಮನಿ ಮುಂದಾಗಿದೆ ಎಂದು ವಿದೇಶಾಂಗ ಸಚಿವಾಲಯ ತಿಳಿಸಿದೆ. * ಇದೀಗ ಜರ್ಮನಿ 2030 ರವರೆಗೆ 10 ಬಿಲಿಯನ್ ಯುರೋಗಳ ಹೊಸ ಹಾಗೂ ಹೆಚ್ಚುವರಿ ಅಭಿವೃದ್ಧಿ ನೆರವಿನ ಮುಂಗಡ ಬದ್ಧತೆಯನ್ನ ಕಲ್ಪಿಸಲು ಒಪ್ಪಿಕೊಂಡಿದೆ' ವಿದೇಶಾಂಗ ಕಾರ್ಯದಎಶಿ ಕ್ವಾತ್ರಾ ಅವರು ತಿಳಿಸಿದ್ದಾರೆ. ಇದರ ನಡುವೆ ಹಸಿರು ಜಲಜನಕ ಹಾಗೂ ನವೀಕರಿಸಬಹುದಾದ ವಸ್ತುಗಳ ಸಹಯೋಗಕ್ಕಾಗಿ ಉಭಯ ದೇಶಗಳ ನಡುವಿನ ಒಪ್ಪಂದಕ್ಕೆ ಸಹಿ ಹಾಕಲಾಗಿರುವ ಬಗ್ಗೆ ತಿಳಿಸಿದ್ದಾರೆ. * ಪ್ರಧಾನಿ ಮೋದಿ ಹಾಗೂ ಜರ್ಮನ್ ಚಾನ್ಸಲರ್ ಶೋಲ್ಜ್ ಅವರ ಜಂಟಿ ಹೇಳಿಕೆಯಲ್ಲಿ ಹಸಿರು ಜಲಜನಕ ಪಾಲುದಾರಿಕೆಯ ಬಗ್ಗೆ ಚರ್ಚಿಸಿದ್ದಾರೆ. ಅದರಂತೆಯೇ 'ಇಂಡೋ-ಜರ್ಮನ್ ಎನರ್ಜಿ ಫೋರಂ ಬೆಂಬಲಿತ ಇಂಡೋ-ಜರ್ಮನ್ ಗ್ರೀನ್ ಹೈಡ್ರೋಜನ್ ಟಾಸ್ಕ್ ಫೋರ್ಸ್'ನ ಅಡಿಯಲ್ಲಿ ಇಂಡೋ-ಜರ್ಮನ್ ಹಸಿರು ಹೈಡ್ರೋಜನ್ ಮಾರ್ಗಸೂಚಿಯನ್ನು ಉಭಯ ದೇಶಗಳು ಅಭಿವೃದ್ಧಿಪಡಿಸಲಿವೆ ಎಂದಿದ್ದಾರೆ. * ಇತ್ತೀಚಿಗೆ 6 ನೇ ಭಾರತ-ಜರ್ಮನಿ ಅಂತರ್-ಸರ್ಕಾರಿ ಸಮಾಲೋಚನೆಯ ಸಮಯದಲ್ಲಿ ಭಾರತ ಹಾಗೂ ಜರ್ಮನಿ ದೇಶಗಳ ಮಧ್ಯೆ ಅನೇಕ ಕ್ಷೇತ್ರಗಳಲ್ಲಿನ '09' ಒಪ್ಪಂದಗಳಿಗೆ ಸಹಿ ಹಾಕಲಾಗಿದೆ ಎಂದು ತಿಳಿಸಿದ್ದಾರೆ.