Job Description: * ಇತ್ತೀಚಿಗೆ ಅಮೇರಿಕ ದೇಶವು ತನ್ನ ವಾರ್ಷಿಕ ಬೌದ್ಧಿಕ ಆಸ್ತಿ ಹಕ್ಕುಗಳ ಕಪ್ಪು ಪಟ್ಟಿಯನ್ನು ಬಿಡುಗಡೆ ಮಾಡಿದೆ, ಆ ಪಟ್ಟಿಯಲ್ಲಿ ಚೀನಾ, ರಷ್ಯಾ ಹಾಗೂ ಭಾರತ ಸೇರಿ ಇನ್ನು ಏಳು ದೇಶಗಳಿವೆ ಎನ್ನಲಾಗಿದೆ. * ಪ್ರಸ್ತುತ ಈ ಎಲ್ಲ ದೇಶಗಳಲ್ಲಿ ಬೌದ್ಧಿಕ ಆಸ್ತಿ ಹಕ್ಕುಗಳ ಜಾರಿ ವ್ಯವಸ್ಥೆ ಸಡಿಲವಾಗಿರುವ ಹಿನ್ನಲೆಯಿಂದಾಗಿ ಅಮೆರಿಕನ್ ಕಂಪನಿಗಳು ಕಾಪಿರೈಟ್ ಹಾಗೂ ಟ್ರೇಡ್‍ಮಾರ್ಕ್ ಕಳ್ಳತನಕ್ಕೆ ಒಳಗಾಗುವ ಅಪಾಯವಿದೆ ಎಂದು ಎಚ್ಚರಿಕೆಯನ್ನು ನೀಡಿದೆ. * ಈ ಪಟ್ಟಿಯಲ್ಲಿ ಚೀನಾ ನಕಲಿ ಹಾಗೂ ಕಳವು ಮಾಲುಗಳ ಅತಿದೊಡ್ಡ ಮೂಲ ಆರ್ಥಿಕತೆಯಾಗಿ ಮುಂದುವರೆದಿದೆ ಎಂದು ವರದಿ ಮಾಡಿದೆ. * ಈ ಹಿಂದಿನ ವರ್ಷ ಕಪ್ಪುಪಟ್ಟಿಯಲ್ಲಿ ಉಕ್ರೇನ್ ದೇಶವು ಸೇರಿತ್ತು. ವ್ಯಾಪಾರ ಕಚೇರಿ, ಸೌದಿ ಅರೇಬಿಯಾವನ್ನು ಆದ್ಯತೆಯ ಕಣ್ಗಾವಲು ಪಟ್ಟಿಯಿಂದ ತಗೆದುಹಾಕಿದೆ. ಪ್ರಸ್ತುತ ನಕಲಿ ಹಾಗೂ ಕಳ್ಳಮಾಲು ತಡೆಗೆ ಕ್ರಮಗಳನ್ನು ತಗೆದುಕೊಳ್ಳುವ ಹಾಗೂ ವಿಶೇಷ ಬೌದ್ಧಿಕ ಆಸ್ತಿ ಜಾರಿ ನ್ಯಾಯಾಲಯಗಳ ಸ್ಥಾಪನೆಯ ಕಾರಣದಿಂದಾಗಿ ಈ ಪಟ್ಟಿಯಿಂದ ತಗೆದುಹಾಕಲಾಗಿದೆ. * ಪ್ರಸ್ತುತ ಈ ಪಟ್ಟಿಯನ್ನು ಸಿದ್ಧಪಡಿಸಲು ಅಮೆರಿಕದ ಟ್ರೇಡ್ ಆಫೀಸ್, ಇದೀಗ ಅಮೇರಿಕದ 100 ಕ್ಕೂ ಅಧಿಕ ವ್ಯಾಪಾರ ಪಾಲುದಾರ ದೇಶಗಳ ಸಾಧನೆಯನ್ನು ಅಭಿನಂದಿಸಿದೆ.