Job Description: * ಭಾರತದಲ್ಲಿ'ಐಫೋನ್ 13' ಸರಣಿಯ ಸ್ಮಾರ್ಟ್‌ಫೋನ್‌ಗಳ ತಯಾರಿಕೆ ಆರಂಭಿಸಲಾಗಿದೆ ಎಂದು ಆಯಪಲ್ ಕಂಪನಿ ಈ ಬಗ್ಗೆ ಮಾಹಿತಿ ನೀಡಿದೆ. * ಈ ಹಿಂದೆ 2017 ರಲ್ಲಿ ಮೊದಲ ಬಾರಿಗೆ ಭಾರತದಲ್ಲಿ ಐಫೋನ್‌ಗಳ ತಯಾರಿಕೆ ಆರಂಭಿಸಿತ್ತು. * ಆಯಪಲ್ ಐಫೋನ್ '13' ಉತ್ತಮ ವಿನ್ಯಾಸ, ವಿಡಿಯೊ ಹಾಗೂಫೋಟೊಗಳಿಗಾಗಿ ಅತ್ಯಾಧುನಿಕ ಕ್ಯಾಮರಾ ವ್ಯವಸ್ಥೆಯನ್ನು ಹೊಂದಿದೆ. ಹಾಗೂ ಅತ್ಯುತ್ತಮ ಕಾರ್ಯನಿರ್ವಹಣೆಯ 'ಎ15 ಬಯೋನಿಕ್ ಚಿಪ್' ಹೊಂದಿರುವ ಐಫೋನ್ 13'ನ್ನು ಭಾರತದಲ್ಲಿ ತಯಾರಿಸಲಾಗುತ್ತಿದೆ. * ಆಯಪಲ್ ಕಂಪನಿಯು ಐಫೋನ್ 11, ಐಫೋನ್ 12 ಸ್ಮಾರ್ಟ್‌ಫೋನ್‌ಗಳನ್ನು ಈಗಾಗಲೇ ದೇಶದಲ್ಲಿ ತಯಾರಿಸುತ್ತಿದೆ. ಇದೀಗ ಐಫೋನ್ 13 ಕೂಡ ಈ ಸಲಿಗೆ ಸೇರಲಿದೆ.