Job Description: * ಕೇಂದ್ರ ಸರ್ಕಾರ ನೀಡಿರುವ ಮಾಹಿತಿ ಪ್ರಕಾರ 2023 ರ ಏಪ್ರಿಲ್ ನಿಂದ ಹಂತಹಂತವಾಗಿ ಸ್ವಯಂಚಾಲಿತ ಪರೀಕ್ಷಾ ಕೇಂದ್ರಗಳ ಮೂಲಕ ವಾಹನಗಳ ಫಿಟ್‌ನೆಸ್ ಪರೀಕ್ಷೆಯನ್ನು ನಡೆಸುವದನ್ನು ಕಡ್ಡಾಯಗೊಳಿಸಿದೆ. ಈಭಾರೀ ಸರಕು ವಾಹನಗಳು ಮತ್ತು ಭಾರೀ ವಾಹನಗಳಿಗೆ ಫಿಟ್‌ನೆಸ್ ಪರೀಕ್ಷೆಯನ್ನು ಕೇಂದ್ರ ರಸ್ತೆ ಸಾರಿಗೆ ಹಾಗೂ ಹೆದ್ದಾರಿ ಸಚಿವಾಲಯವು ನಡೆಸಲಿದೆ ಎಂದು ತಿಳಿಸಿದ್ದಾರೆ. *ಸ್ವಯಂಚಾಲಿತ ಪರೀಕ್ಷಾ ಕೇಂದ್ರಗಳ ಮೂಲಕ ಪ್ರಯಾಣಿಕ ಮೋಟಾರು ವಾಹನಗಳ ಫಿಟ್ನೆಸ್ ಟೆಸ್ಟ್ 2023 ರ ಏಪ್ರಿಲ್. 01 ರಿಂದ ಕಡ್ಡಾಯವಾಗಿರುತ್ತದೆ ಎಂದು ತಿಳಿಸಿದ್ದಾರೆ. * ಮಧ್ಯಮ ಸರಕು ವಾಹನಗಳು ಮತ್ತು ಮಧ್ಯಮ ಪ್ರಯಾಣಿಕ ಮೋಟಾರು ವಾಹನಗಳು ಮತ್ತು ಲಘು ಮೋಟಾರು ವಾಹನಗಳ ಫಿಟ್ನೆಸ್'ನ್ನು ಸಾರಿಗೆಯ ಸಂದರ್ಭದಲ್ಲಿ ಅಂದರೆ 2024 ರ ಜೂನ್. 01 ರಿಂದ ಕಡ್ಡಾಯಗೊಳಿಸಲಾಗುತ್ತದೆ ಎಂದಿದ್ದಾರೆ. * ಕೇಂದ್ರ ಮೋಟಾರು ವಾಹನ ನಿಯಮಗಳು 1989 ರ ನಿಯಮ 175 ರ ಪ್ರಕಾರ ನೋಂದಾಯಿಸಲಾಗಿರುವ ಸ್ವಯಂಚಾಲಿತ ಪರೀಕ್ಷಾ ಕೇಂದ್ರದ ಮೂಲಕ ಮಾತ್ರ ಮೋಟಾರು ವಾಹನಗಳ ಕಡ್ಡಾಯ ಫಿಟ್‌ನೆಸ್ ಮಾಡಿಸಬೇಕು ಎಂದು ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವಾಲಯವು 2022 ರ ಏಪ್ರಿಲ್. 05 ರಂದು ಅಧಿಸೂಚನೆಯನ್ನು ಹೊರಡಿಸಿದೆ. * ನೋಂದಣಿಯ ನವೀಕರಣದ ಸಮಯದಲ್ಲಿ ಅಂದರೆ 15 ವರ್ಷಗಳ ನಂತರ ವೈಯಕ್ತಿಕ ವಾಹನಗಳಿಗೆ ಫಿಟ್‌ನೆಸ್ ಪರೀಕ್ಷೆಯನ್ನು ಮಾಡಲಾಗುತ್ತದೆ. * ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವಾಲಯವು ಇದೊಂದು ಭಾರತ ಸರ್ಕಾರದ ಸಚಿವಾಲಯವಾಗಿದೆ, ಈ ಸಚಿವಾಲಯವು ಕೇಂದ್ರ ಇಂಜಿನಿಯರಿಂಗ್ ಸೇವೆಗಳ (ರಸ್ತೆಗಳು) ಕೇಡರ್‌ನ ಅದರ ಅಧಿಕಾರಿಗಳ ಮೂಲಕ ದೇಶದ ರಾಷ್ಟ್ರೀಯ ಹೆದ್ದಾರಿಗಳ ಅಭಿವೃದ್ಧಿಯ ಜವಾಬ್ದಾರಿಯನ್ನು ಒಳಗೊಂಡಿದೆ. ಭಾರತದಲ್ಲಿನ ಒಟ್ಟು ಸರಕುಗಳ ಶೇ. 60 ಪ್ರತಿಶತದಷ್ಟು ಹಾಗೂ ಪ್ರಯಾಣಿಕರ ದಟ್ಟಣೆಯ ಶೇ. 85 ಪ್ರತಿಶತವನ್ನು ಸಾಗಿಸಲು ರಸ್ತೆಗಳನ್ನು ಬಳಕೆ ಮಡಲಾಗುತ್ತದೆ.