Job Description: * ಇತ್ತೀಚಿಗೆ ರಕ್ಷಣಾ ಹಾಗೂ ಸಂಶೋಧನಾ(DRDO) ಸಂಸ್ಥೆ ಒಡಿಶಾದ ಭುವನೇಶ್ವರದಲ್ಲಿ ಘನ ಇಂಧನ ಸಾಮರ್ಥ್ಯದ ಡಕ್ಟೆಡ್ ರಾಮ್‌ಜೆಟ್ ಕ್ಷಿಪಣಿ ವ್ಯವಸ್ಥೆಯನ್ನು ಯಶಸ್ವಿ ಉಡಾವಣೆ ಮಾಡಿದೆ. * ಡಿಫೆನ್ಸ್ ರಿಸರ್ಚ್ ಅಂಡ್ ಡೆವಲಪ್‌ಮೆಂಟ್ ಆರ್ಗನೈಸೇಶನ್ (DRDO) ಒಡಿಶಾ ಕರಾವಳಿಯ ಚಂಡೀಪುರದ ಇಂಟಿಗ್ರೇಟೆಡ್ ಟೆಸ್ಟ್ ರೇಂಜ್ ನಿಂದ ಘನ ಇಂಧನ ಡಕ್ಟೆಡ್ ರಾಮ್‌ಜೆಟ್ ಕ್ಷಿಪಣಿ ವ್ಯವಸ್ಥೆಯನ್ನು ಬೂಸ್ಟರ್‌ನ ಹಾರಾಟದ ಪ್ರಯೋಗವನ್ನು ಯಶಸ್ವಿಯಾಗಿ ನಡೆಸಿದೆ. * DRDO ಸಂಕೀರ್ಣ ಕ್ಷಿಪಣಿ ವ್ಯವಸ್ಥೆಯಲ್ಲಿ ಸೇರಿರುವ ಎಲ್ಲಾ ನಿರ್ಣಾಯಕ ಘಟಕಗಳ ವಿಶ್ವಾಸಾರ್ಹ ಕಾರ್ಯನಿರ್ವಹಣೆಯನ್ನು ಪರೀಕ್ಷೆಯು ಯಶಸ್ವಿಗೊಳಿಸಿದೆ. SFDR ಆಧಾರಿತ ಪ್ರೊಪಲ್ಷನ್ ಕ್ಷಿಪಣಿಯನ್ನು ಸೂಪರ್ಸಾನಿಕ್ ವೇಗದಲ್ಲಿ ಬಹಳ ದೂರದಲ್ಲಿ ವೈಮಾನಿಕ ಬೆದರಿಕೆಗಳನ್ನು ಎದುರಿಸಲು ಸಿದ್ಧವಾಗಿದೆ ಎಂದು ತಿಳಿಸಿದೆ. * ITRನಿಂದ ನಿಯೋಜಿಸಲಾದ ಟೆಲಿಮೆಟ್ರಿ, ರಾಡಾರ್ ಹಾಗೂ ಎಲೆಕ್ಟ್ರೋ-ಆಪ್ಟಿಕಲ್ ಟ್ರ್ಯಾಕಿಂಗ್ ಸಿಸ್ಟಮ್ಸ್ ನಂತಹ ಹಲವಾರು ರೇಂಜ್ ಉಪಕರಣಗಳ ಮೂಲಕ ಸೆರೆಹಿಡಿಯಲಾದ ಡೇಟಾದಿಂದ ಸಿಸ್ಟಮ್‌ನ ಕಾರ್ಯಕ್ಷಮತೆಯನ್ನು ದೃಢೀಕರಿಸಲಾಗಿದೆ, SFDR ನ್ನು ಹೈದರಾಬಾದ್‌ನ ಡಿಫೆನ್ಸ್ ರಿಸರ್ಚ್ ಅಂಡ್ ಡೆವಲಪ್‌ಮೆಂಟ್ ಲ್ಯಾಬೊರೇಟರಿ (DRDL), RCI, ಹೈದರಾಬಾದ್ ಹಾಗೂ ಪುಣೆಯಂತಹ ಡಿಆರ್‌ಡಿಒ ಪ್ರಯೋಗಾಲಯಗಳ ಸಹಯೋಗದೊಂದಿಗೆ ಅಭಿವೃದ್ಧಿಪಡಿಸಿದೆ. * ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು, SFDR ನ ಯಶಸ್ವಿ ಪ್ರಯೋಗಕ್ಕಾಗಿ DRDOವನ್ನು ಅಭಿನಂದಿಸಿದ್ದಾರೆ ಹಾಗೂ ದೇಶದಲ್ಲಿ ನಿರ್ಣಾಯಕ ಕ್ಷಿಪಣಿ ತಂತ್ರಜ್ಞಾನಗಳ ಅಭಿವೃದ್ಧಿಗೆ ಪ್ರಮುಖ ಮೈಲಿಗಲಾಗಿದೆ ಎಂದು ತಿಳಿಸಿದ್ದಾರೆ. ವಿನ್ಯಾಸ, ಅಭಿವೃದ್ಧಿ ಹಾಗೂ ಪರೀಕ್ಷೆಯಲ್ಲಿ ತೊಡಗಿರುವ ತಂಡಗಳಿಗೆ ಪೂರಕವಾಗಿ, ರಕ್ಷಣಾ ಸಂಶೋಧನೆ ಹಾಗೂ ಅಭಿವೃದ್ಧಿ ಇಲಾಖೆಯ ಕಾರ್ಯದರ್ಶಿಯ ಡಿಆರ್‌ಡಿಒ ಅಧ್ಯಕ್ಷ ಡಾ ಜಿ ಸತೀಶ್ ರೆಡ್ಡಿ ಈ ಯಶಸ್ವಿ ಪ್ರಯೋಗಕ್ಕೆ ಅಭಿನಂದನೆಗಳನ್ನು ತಿಳಿಸಿದ್ದಾರೆ. * ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (DRDO) ಭಾರತ ಸರ್ಕಾರದ ರಕ್ಷಣಾ ಸಚಿವಾಲಯದ ರಕ್ಷಣಾ ಸಂಶೋಧನೆ ಹಾಗೂ ಅಭಿವೃದ್ಧಿ ಇಲಾಖೆಯ ಅಡಿಯಲ್ಲಿ ಪ್ರಧಾನ ಸಂಸ್ಥೆಯಾಗಿದೆ, ಇದು ತನ್ನ ಪ್ರಧಾನ ಕಛೇರಿಯನ್ನು ದೆಹಲಿಯಲ್ಲಿ ಹೊಂದಿದೆ. ರಕ್ಷಣಾ ಸಚಿವಾಲಯದ ಆಡಳಿತ ನಿಯಂತ್ರಣದ ಅಡಿಯಲ್ಲಿ ನೇರವಾಗಿ ಗ್ರೂಪ್ 'ಎ' ಅಧಿಕಾರಿಗಳು / ವಿಜ್ಞಾನಿಗಳ ಸೇವೆಯಾಗಿ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸೇವೆ (DRDO) ನ್ನು 1979 ರಲ್ಲಿ ಸ್ಥಾಪಿಸಲಾಗಿದೆ.