Job Description: * ಪ್ರತಿ ವರ್ಷವು ಮಾರ್ಚ್. 22 ರಂದು ವಿಶ್ವ ಜಲ ದಿನವನ್ನು ಆಚರಣೆ ಮಾಡಲಾಗುತ್ತದೆ. ಈ ದಿನದಂದು ನೀರಿನ ಮಹತ್ವ ಹಾಗೂ ಅದರ ಸಂರಕ್ಷಣೆಯ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲಾಗುತ್ತದೆ. * ಮಾರ್ಚ್. 22 ಈ ದಿನವು ವಿಶ್ವಸಂಸ್ಥೆಯ ಸುಸ್ಥಿರ ಅಭಿವೃದ್ಧಿ ಗುರಿ '6' ಸಾಧನೆಯನ್ನು ಬೆಂಬಲಿಸುತ್ತದೆ. ಈ 'SDG 6' 2030 ರ ವೇಳೆಗೆ ವಿಶ್ವದಾದ್ಯಂತ ನೈರ್ಮಲ್ಯ ಹಗ್ಗವು ಸುರಕ್ಷಿತ ನೀರನ್ನು ಪಡೆದುಕೊಳ್ಳಲು ಸಹಾಯ ಮಾಡುತ್ತದೆ. * ಪ್ರಸ್ತುತ ಪ್ರಪಂಚದಾದ್ಯಂತ ಇರುವ ನೀರಿನ ಬಿಕ್ಕಟ್ಟನ್ನು ನಿವಾರಿಸಲು ಅನೇಕ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲು ಈ ದಿನವು ಜನರಿಗೆ ಜ್ಞಾಪನೆಯಾಗಿ ತನ್ನ ಕಾರ್ಯನಿರ್ವಹಿಸುತ್ತದೆ. * ವಿಶ್ವ ಜಲ ದಿನ 2022 ರ ಧ್ಯೆಯ ವ್ಯಾಕ್ಯವು 'ಅಂತರ್ಜಲ, ಅದೃಶ್ಯವನ್ನು ಗೋಚರಿಸುವಂತೆ ಮಾಡಲಾಗುತ್ತದೆ' ಇದು ಈ ವರ್ಷದ ವಿಶ್ವ ಜಲ ದಿನದ ಧ್ಯೆಯ ವ್ಯಾಕ್ಯವಾಗಿದೆ. ಇದರಿಂದಾಗಿ ಸದ್ಯ ಕ್ಷೀಣಿಸುತ್ತಿರುವ ಜಲ ಸಂಪನ್ಮೂಲದ ಬಗ್ಗೆ ಅರಿವು ಮೂಡಿಸಲಾಗುತ್ತದೆ. * ಈ ಹಿಂದೆ 1992 ರಲ್ಲಿ ರಿಯೊ ಡಿ ಜನೈರೊದಲ್ಲಿ ಜರುಗಿದ ಪರಿಸರ ಹಾಗೂ ಅಭಿವೃದ್ಧಿಯ ವಿಶ್ವಸಂಸ್ಥೆಯ ಸಮ್ಮೇಳನದಲ್ಲಿ ವಿಶ್ವ ಜಲ ದಿನವನ್ನು ಆಚರಿಸುವ ಯೋಜನೆಯನ್ನು ತರಲಾಗಿತ್ತು. ನಂತರ UN ಜನರಲ್ ಅಸೆಂಬ್ಲಿ 1992 ರಲ್ಲಿ, ಮಾರ್ಚ್. 22'ನ್ನು ವಿಶ್ವ ನೀರಿನ ದಿನ ಘೋಷಣೆ ಮಾಡುವ ಮೂಲಕ ನಿರ್ಣಯವನ್ನು ಅಂಗೀಕರಿಸಿದೆ. ಈ ವಿಶ್ವ ನೀರಿನ ದಿನದ ಆಚರಣೆಯು 1993 ರಲ್ಲಿ ಆರಂಭಿಸಲಾಗಿದೆ.