Job Description: * ಇತ್ತೀಚಿಗೆ ಉಕ್ರೇನ್‌ ಹಾಗೂ ರಷ್ಯಾದ ಯುದ್ಧದ ನಡುವೆ ಯುಎಸ್‌ ಫೆಡರಲ್ ರಿಸರ್ವ್ ಬಡ್ಡಿದರವನ್ನು ಹೆಚ್ಚಿಸಿದೆ. ಯುಎಸ್‌ ಫೆಡರಲ್ ರಿಸರ್ವ್ 1970 ರ ನಂತರ ಆಗಿರುವ ಕೆಟ್ಟ ಹಣದುಬ್ಬರವನ್ನು ಎದುರಿಸುವ ಗುರಿಯನ್ನು ಹೊಂದಿ ಅದರ ಭಾಗವಾಗಿ ಮಾರ್ಚ್. 16 ರಂದು ಬೆಂಚ್-ಮಾರ್ಕ್ ಅಲ್ಪಾವಧಿಯ ಬಡ್ಡಿದರದಲ್ಲಿ ಶೇ. 0.25 ರಷ್ಟು ಹೆಚ್ಚಿಸಿದೆ. * ಇತ್ತೀಚಿಗೆ ಫೆಡರಲ್ ಓಪನ್ ಮಾರ್ಕೆಟ್ ಕಮಿಟಿಯು ತನ್ನ ಸಭೆಯಲ್ಲಿ ಕೈಗೊಂಡಿರುವ ನಿರ್ಧಾರವು ಸುಮಾರು '3' ವರ್ಷಗಳಲ್ಲಿ ಮೊಟ್ಟ ಮೊದಲ ಬಾರಿಗೆ ಪ್ರಮುಖ ಬಡ್ಡಿದರವನ್ನು ಏರಿಕೆ ಮಾಡಿದೆ. * ಈ ಹಿಂದೆ 2018 ರ ಡಿಸೆಂಬರ್'ನಲ್ಲಿ ಸಮಿತಿಯು ಬಡ್ಡಿದರವನ್ನು ಹೆಚ್ಚಿಸಿತ್ತು. * ಇತ್ತೀಚಿಗೆ ಫೆಡ್ ಅಧಿಕಾರಿಗಳು ಬಿಡುಗಡೆ ಮಾಡಿರುವ ವರದಿಯ ಪ್ರಕಾರ ಹಣದುಬ್ಬರವು ತೀವ್ರ ಹೆಚ್ಚಳವಾಗಿದೆ. 2022 ಕ್ಕೆ 4.3 ಶೇಕಡಾದ ವರೆಗೆ ಕೊನೆಯಾಗಲಿದೆ ಎಂಬ ನಿರೀಕ್ಷೆಯಿದೆ ಎಂದಿದ್ದಾರೆ. * ಅಮೇರಿಕದ ಕೇಂದ್ರೀಯ ಬ್ಯಾಂಕ್‌ ಫೆಡರಲ್‌ ರಿಸರ್ವ್‌, 2019 ರಲ್ಲಿ '3' ಬಾರಿಗೆ ಬಡ್ಡಿ ದರಗಳಲ್ಲಿ ಕಡಿತ ಮಾಡಲಾಗಿತ್ತು. ಇದರಿಂದಾಗಿ ಮೂಲ ಬಡ್ಡಿದರವು ಶೇ. 1.50 ರಿಂದ ಶೇ 1.75ರ ಮಟ್ಟಕ್ಕೆ ತಲುಪಿದೆ ಎನ್ನಲಾಗಿದೆ. ಪ್ರಸ್ತುತ ಜಾಗತಿಕ ವಿದ್ಯಮಾನಗಳ ಎದುರು ಅಮೆರಿಕದ ಆರ್ಥಿಕತೆಯನ್ನು ಬಲಿಷ್ಠಗೊಳಿಸಲು ಉದ್ದೇಶದಿಂದ 3 ನೇ ಬಾರಿಗೆ ಬಡ್ಡಿದರದಲ್ಲಿ ಕಡಿತವನ್ನು ಮಾಡಲಾಗಿದೆ ಎಂದು ಬ್ಯಾಂಕ್‌ ನ ಅಧ್ಯಕ್ಷ ಜೆರೊಮ್‌ ಪಾವೆಲ್ ಅವರು ಮಾಹಿತಿ ನೀಡಿದ್ದಾರೆ.