Job Description: * ಪ್ರಸ್ತುತ ಹಿಜಾಬ್ ಧರಿಸುವುದು ಇಸ್ಲಾಂನಲ್ಲಿ ಅತ್ಯಗತ್ಯ ಅಭ್ಯಾಸವಲ್ಲ ಎಂದು ಕರ್ನಾಟಕ ರಾಜ್ಯ ಹೈಕೋರ್ಟ್ ಮಹತ್ವದ ತೀರ್ಪುನ್ನು ನೀಡಿದೆ. * 'ಕರ್ನಾಟಕ ಹೈಕೋರ್ಟ್' ನೀಡಿರುವ ತೀರ್ಪಿನ ಪ್ರಕಾರ ಮುಸ್ಲಿಂ ಮಹಿಳೆಯರು ಹಿಜಾಬ್ ಧರಿಸುವುದು ಇಸ್ಲಾಮಿಕ್ ನಂಬಿಕೆಯಲ್ಲಿ ಅಗತ್ಯ ಧಾರ್ಮಿಕ ಆಚರಣೆಯ ಭಾಗವಲ್ಲ ಎಂದು ಮುಖ್ಯ ನ್ಯಾಯಮೂರ್ತಿ ರಿತು ರಾಜ್ ಅವಸ್ತಿ ನೇತೃತ್ವದ ನ್ಯಾಯಪೀಠವು ತೀರ್ಪನ್ನು ನೀಡಿದೆ. * ಕಳೆದ ಅನೇಕ ದಿನಗಳಿಂದ ಹಿಜಾಬ್ ನಿಷೇಧವನ್ನು ಪ್ರಶ್ನಿಸುವ ಅರ್ಜಿಗಳ ವಿಚಾರಣೆಯನ್ನು ನಡೆಸುತ್ತಿರುವ ನ್ಯಾಯಾಲಯವು ಕೂಡ ಮೂರು ಪ್ರಶ್ನೆಗಳನ್ನು ಕೇಳಿದೆ ಎನ್ನಲಾಗಿದೆ. * ಈ ಮೂರು ಪ್ರಶ್ನೆಗಳು: - ಪ್ರಸ್ತುತ ಹಿಜಾಬ್ ಧರಿಸುವುದು ಇಸ್ಲಾಂ ಧರ್ಮದ ಅಡಿಯಲ್ಲಿ ಅತ್ಯಗತ್ಯ ಧಾರ್ಮಿಕ ಆಚರಣೆಯೇ.? - ಶಾಲಾ ಕಾಲೇಜುಗಳಲ್ಲಿ ಸಮವಸ್ತ್ರದ ಸಲಹೆಯು ಹಕ್ಕುಗಳ ಉಲ್ಲಂಘನೆಯಾಗಿದೆಯೇ.? - ಕರ್ನಾಟಕ ಸರ್ಕಾರದ ಫೆಬ್ರವರಿ. 5ರ ಆದೇಶವು ಅನುಚ್ಛೇದ 14 ಮತ್ತು 15 ಅನ್ನು ಉಲ್ಲಂಘಿಸುತ್ತದೆಯೇ.? ಈ ಪ್ರಶ್ನೆಗಳಿಗೆ ನ್ಯಾಯಾಲಯ ನೀಡಿದ ಉತ್ತರ: - ಹಿಜಾಬ್ ಧರಿಸುವುದು ನನ್ನ ಮುಸ್ಲಿಂ ಮಹಿಳೆಯರು ಇಸ್ಲಾಂ ಧರ್ಮದ ಅಡಿಯಲ್ಲಿ ಅಗತ್ಯ ಧಾರ್ಮಿಕ ಆಚರಣೆಯ ಭಾಗವಲ್ಲ ಎಂದಿದೆ. - ಶಾಲಾ ಸಮವಸ್ತ್ರವನ್ನು ವಿದ್ಯಾರ್ಥಿಗಳು ಆಕ್ಷೇಪಿಸುವದು ನಿರ್ಬಂಧವಾಗಿದೆ. - ಯಾವುದೇ ರೀತಿಯ ಆದೇಶ ಹೊರಡಿಸುವ ಅಧಿಕಾರ ಸರ್ಕಾರಕ್ಕೆ ಇದೆ. * ಕರ್ನಾಟಕದ ಉಚ್ಚ ನ್ಯಾಯಾಲಯ ಇದನ್ನು ಸಾಮಾನ್ಯವಾಗಿ ಕರ್ನಾಟಕ ಉಚ್ಚ ನ್ಯಾಯಾಲಯ ಎನ್ನಲಾಗುತ್ತದೆ. ಈ ನ್ಯಾಯಾಲಯದ ಪ್ರಧಾನ ಪೀಠವು ಕರ್ನಾಟಕದ ರಾಜಧಾನಿ ಬೆಂಗಳೂರಿನಲ್ಲಿದೆ, ಹುಬ್ಬಳ್ಳಿ-ಧಾರವಾಡ ಹಾಗೂ ಗುಲ್ಬರ್ಗಾದಲ್ಲಿದೆ ಹೆಚ್ಚುವರಿ ಪೀಠಗಳಿವೆ. ಈ ಮೊದಲು ಹಿಂದೆ ಮೈಸೂರು ಹೈಕೋರ್ಟ್ ಎನ್ನಲಾಗುತ್ತಿತ್ತು.