* ಉಪ ರಾಷ್ಟ್ರಪತಿ ಚುನಾವಣೆಗೆ ಸಂಬಂಧಿಸಿದಂತೆ ರಾಜ್ಯ ಸಭೆಯ ಪ್ರಧಾನ ಕಾರ್ಯದರ್ಶಿ ಪಿ.ಸಿ. ಮೋದಿಯನ್ನು ಚುನಾವಣಾ ಅಧಿಕಾರಿಯಾಗಿ ನೇಮಕ ಮಾಡಲಾಗಿದೆ.* ಗರಿಮಾ ಜೈನ್ (ಜಂಟಿ ಕಾರ್ಯದರ್ಶಿ) ಮತ್ತು ವಿಜಯ್ ಕುಮಾರ್ (ರಾಜ್ಯಸಭೆ ಕಾರ್ಯದರ್ಶಿ) ಅವರನ್ನು ಸಹಾಯಕ ಚುನಾವಣಾ ಅಧಿಕಾರಿಗಳಾಗಿ ನೇಮಕ ಮಾಡಿದ್ದಾರೆ.* ಈ ಚುನಾವಣೆ 1952ರ ರಾಷ್ಟ್ರಪತಿ ಹಾಗೂ ಉಪ ರಾಷ್ಟ್ರಪತಿ ಚುನಾವಣಾ ಕಾಯ್ದೆ ಮತ್ತು 1974ರ ನಿಯಮಾವಳಿಯ ಪ್ರಕಾರ ನಡೆಯಲಿದೆ. ಈ ಬಾರಿ ಸಂಪ್ರದಾಯ ಬದಲಾಗಿದೆ ಹಿಂದಿನ ಉಪ ರಾಷ್ಟ್ರಪತಿ ಚುನಾವಣೆಯಲ್ಲಿ ಲೋಕಸಭೆ ಕಾರ್ಯದರ್ಶಿ ಮುಖ್ಯ ಅಧಿಕಾರಿಯಾಗಿದ್ದರೆ, ಈ ಬಾರಿ ರಾಜ್ಯಸಭೆ ಕಾರ್ಯದರ್ಶಿಗೆ ಆ ಹೊಣೆ ನೀಡಲಾಗಿದೆ.* ಹಾಲಿ ಉಪ ರಾಷ್ಟ್ರಪತಿ ಜಗದೀಪ್ ಧಂಖರ್ ಅವರು ಅನಾರೋಗ್ಯದ ಹಿನ್ನೆಲೆಯಲ್ಲಿ ರಾಜೀನಾಮೆ ನೀಡಿದ ನಂತರ ಈ ಚುನಾವಣಾ ಪ್ರಕ್ರಿಯೆ ಆರಂಭವಾಗಿದೆ.