* ಭಾರತೀಯ ಚುನಾವಣಾ ಆಯೋಗವು, ಚುನಾವಣೆಗೆ ಸಂಬಂಧಿಸಿದಂತೆ ಎಲ್ಲ ಮಾಹಿತಿಗಳು ಮತ್ತು ಸೇವೆಗಳನ್ನು ಒಂದೇ ವೇದಿಕೆಯಲ್ಲಿ ಒದಗಿಸುವ ನಿಟ್ಟಿನಲ್ಲಿ ಹೊಸ ಕಿರು ತಂತ್ರಾಂಶ (ಆ್ಯಪ್) ಬಿಡುಗಡೆಗೆ ಸಿದ್ಧತೆ ನಡೆಸಿದೆ.* ಈ ಆ್ಯಪ್ನಲ್ಲಿ ಮತದಾರರು, ರಾಜಕೀಯ ಪಕ್ಷಗಳು ಹಾಗೂ ಅಧಿಕಾರಿಗಳಿಗೆ ಅಗತ್ಯವಿರುವ ಸಂಪೂರ್ಣ ಮಾಹಿತಿ ಲಭ್ಯವಾಗಲಿದೆ. ಈಗಿರುವ 40ಕ್ಕೂ ಹೆಚ್ಚು ವಿಭಿನ್ನ ಆ್ಯಪ್ಗಳನ್ನು ಒಂದೆಡೆ ಸೇರಿಸಿ ಈ ನೂತನ ಆ್ಯಪ್ ರೂಪುಗೊಳ್ಳಲಿದೆ.* ಹೆಚ್ಚಿನ ಸೇವೆಗಳಿಗೆ ಪ್ರತ್ಯೇಕ ಆ್ಯಪ್ ಡೌನ್ಲೋಡ್ ಮಾಡಬೇಕಾದ ಅನಿವಾರ್ಯತೆ ಇತ್ತದೆ, ಇದು ಬಳಕೆದಾರರಿಗೆ ತೊಂದರೆಯಾಗಿದೆ. ಈ ಸಮಸ್ಯೆಗೆ ಪರಿಹಾರವಾಗಿ, ಆಯೋಗವು 'ಇಸಿಐನೆಟ್' ಎಂಬ ಹೊಸ ಆ್ಯಪ್ನ್ನು ಅಭಿವೃದ್ಧಿಪಡಿಸುತ್ತಿದ್ದು, ಇದು ಸ್ಮಾರ್ಟ್ಫೋನ್ ಹಾಗೂ ಡೆಸ್ಕ್ಟಾಪ್ ಎರಡರಲ್ಲಿ ಲಭ್ಯವಿರಲಿದೆ.* ಈ ಮೂಲಕ ಅಧಿಕೃತ ಹಾಗೂ ನಿಖರ ಅಂಕಿಅಂಶಗಳು ಒದಗಿಸಲಾಗುತ್ತದೆ. ಯಾವುದೇ ಸಮಸ್ಯೆ ಉಂಟಾದರೆ, ಶಾಸನಬದ್ಧ ನಮೂನೆಗಳಲ್ಲಿ ಸಲ್ಲಿಸಲಾದ ದತ್ತಾಂಶಗಳೇ ಅಂತಿಮವಾಗಿರಲಿವೆ.* ಈಗಾಗಲೇ ‘ವೋಟರ್ ಹೆಲ್ಪ್ಲೈನ್’, ವೋಟರ್ ಟರ್ನ್ಔಟ್, ಸಿವಿಜಿಲ್, ಸುವಿಧಾ, ಸಕ್ಷಮ್, ಹಾಗೂ ಕೆವೈಸಿ ಮೊದಲಾದ ವಿವಿಧ ಆ್ಯಪ್ಗಳಿವೆ. ಇವುಗಳ ಸಂಯೋಜನೆಯಿಂದಾಗಿ, ಸುಮಾರು 5.5 ಕೋಟಿ ಆ್ಯಪ್ಗಳು ಈಗಾಗಲೇ ಡೌನ್ಲೋಡ್ ಆಗಿವೆ.