* ಭಾರತದ ಅನುಭವಿ ಟೆನ್ನಿಸ್ ತಾರೆ 43 ವರ್ಷದ ರೋಹನ್ ಬೋಪಣ್ಣ ಅವರು ಆಸ್ಟ್ರೇಲಿಯನ್ ಓಪನ್ ಪುರುಷರ ಡಬಲ್ಸ್ ಕ್ವಾರ್ಟರ್-ಫೈನಲ್‌ನಲ್ಲಿ ಬೋಪಣ್ಣ ತಮ್ಮ ಆಸ್ಟ್ರೇಲಿಯಾದ ಜೋಡಿ ಮ್ಯಾಥ್ಯೂ ಎಬ್ಡೆನ್ ಅವರೊಂದಿಗೆ ಅರ್ಜೆಂಟೀನಾದ ಮ್ಯಾಕ್ಸಿಮೊ ಗೊಂಜಾಲೆಜ್ ಮತ್ತು ಆಂಡ್ರೆಸ್ ಮೊಲ್ಟೆನಿ ವಿರುದ್ಧ 6-4, 7-6 (5) ಸೆಟ್‌ಗಳಿಂದ ಜಯಗಳಿಸಿದರು.* ಆ ಮೂಲಕ 43 ವರ್ಷದ ಹಿರಿಯ ಟೆನ್ನಿಸ್‌ ಆಟಗಾರ, ಈ ಗೆಲುವಿನೊಂದಿಗೆ ATP ಡಬಲ್ಸ್  ಶ್ರೇಯಾಂಕ ಪಟ್ಟಿಯಲ್ಲಿ ಅಗ್ರಸ್ಥಾನ ಅಲಂಕರಿಸಿದ ವಿಶ್ವದ ಅತ್ಯಂತ ಹಿರಿಯ ಆಟಗಾರ ಎಂಬ ದಾಖಲೆ ಬೋಪಣ್ಣ ಪಾಲಾಗಿದೆ. * ಪುರುಷರ ಡಬಲ್ಸ್‍ನಲ್ಲಿ ವಿಶ್ವ ನಂ.1 ಶ್ರೇಯಾಂಕವನ್ನು ಸಾಧಿಸಿದ ಅತ್ಯಂತ ಹಿರಿಯ ಟೆನಿಸ್ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಮೂಲತಃ ಕೊಡಗಿನವರಾದ ರೋಹನ್ ಬೋಪಣ್ಣ ತಮ್ಮ 43ನೇ ವಯಸ್ಸಿನಲ್ಲಿ ಈ ಸಾಧನೆ ಮಾಡಿರುವುದು ವಿಶೇಷ.