Loading..!
KPSC Vaani
Login
My Orders
My Cart
Shorts
Job news
Current Affairs
Buy books
Practice Papers
Quizzes
Question Papers
Institutes
Flash news
Cut Offs
Blogs
Study Materials
Contact Us
About Us
More
Study Materials
Cut Offs
Blogs
Contact Us
Upload file
About Us
Login
Register
×
Warning!
Enter minimum 2 characters.
Back
ಪ್ರಚಲಿತ ಘಟನೆಗಳು
ಕಿಸಾನ್ ಕ್ರೆಡಿಟ್ ಕಾರ್ಡ್ ಯೋಜನೆಯಲ್ಲಿ ಭರ್ಜರಿ ಬದಲಾವಣೆ: ರೈತರಿಗೆ ಇನ್ಮುಂದೆ 5 ಲಕ್ಷ ರೂ.ವರೆಗೆ ಸಾಲ
Authored by:
Akshata Halli
Date:
17 ಮಾರ್ಚ್ 2026
➤
ಕೇಂದ್ರ ಸರ್ಕಾರವು ರೈತರ ಆರ್ಥಿಕ ಸಬಲೀಕರಣಕ್ಕಾಗಿ ಕಿಸಾನ್ ಕ್ರೆಡಿಟ್ ಕಾರ್ಡ್ (KCC) ಯೋಜನೆಯಲ್ಲಿ ಮಹತ್ವದ ಸುಧಾರಣೆಗಳನ್ನು ತಂದಿದ್ದು, ಬೆಳೆ ಸಾಲದ ಮಿತಿಯನ್ನು 3 ಲಕ್ಷದಿಂದ
5 ಲಕ್ಷ ರೂ.ಗೆ
ಏರಿಸಿದೆ. ಕೃಷಿಯೊಂದಿಗೆ ಪಶುಸಂಗೋಪನೆ ಮತ್ತು ಮೀನುಗಾರಿಕೆಗೂ ಈ 5 ಲಕ್ಷ ರೂ.ವರೆಗಿನ ಸಾಲ ಸೌಲಭ್ಯವನ್ನು ವಿಸ್ತರಿಸಲಾಗಿದ್ದು, ಜನವರಿ 1, 2025 ರಿಂದ ಜಾರಿಗೆ ಬರುವಂತೆ ಶೂನ್ಯ ಭದ್ರತೆಯ (Collateral-free) ಸಾಲದ ಮಿತಿಯನ್ನು
2 ಲಕ್ಷ ರೂ.ಗೆ
ಹೆಚ್ಚಿಸಲಾಗಿದೆ. ರೈತರಿಗೆ ಕೇವಲ 7% ಬಡ್ಡಿದರದಲ್ಲಿ ಸಾಲ ಲಭ್ಯವಿದ್ದು, ಸರಿಯಾದ ಸಮಯಕ್ಕೆ ಮರುಪಾವತಿ ಮಾಡುವವರಿಗೆ ಬಡ್ಡಿ ರಿಯಾಯಿತಿಯೊಂದಿಗೆ ಕೇವಲ
4% ದರದಲ್ಲಿ
ಸಾಲ ಸಿಗಲಿದೆ, ಇದು ಕೃಷಿ ವಲಯದ ಆರ್ಥಿಕ ಭದ್ರತೆಯನ್ನು ಮತ್ತಷ್ಟು ಬಲಪಡಿಸಲಿದೆ.
➤
ಡಿಜಿಟಲ್ ಕ್ರಾಂತಿ: ಕಿಸಾನ್ ರಿನ್ ಪೋರ್ಟಲ್:
ಸೆಪ್ಟೆಂಬರ್ 2023 ರಲ್ಲಿ ಚಾಲನೆ ನೀಡಲಾದ ಈ ಪೋರ್ಟಲ್ ಕೆಸಿಸಿ ಯೋಜನೆಯ ಅನುಷ್ಠಾನದಲ್ಲಿ ಪಾರದರ್ಶಕತೆ ತಂದಿದೆ.
- ಏಕಗವಾಕ್ಷಿ ವ್ಯವಸ್ಥೆ:
ರೈತರ ಪ್ರೊಫೈಲ್, ಸಾಲ ವಿತರಣೆ ಮತ್ತು ಬಡ್ಡಿ ಸಬ್ಸಿಡಿ ವಿವರಗಳು ಒಂದೇ ಕಡೆ ಲಭ್ಯ.
- ಸರಳ ಅರ್ಜಿ ಸಲ್ಲಿಕೆ:
ಪಿಎಂ-ಕಿಸಾನ್ ಡೇಟಾ ಬಳಸಿ ಕೇವಲ ಒಂದು ಪುಟದ ಸರಳ ಅರ್ಜಿಯ ಮೂಲಕ ಸಾಲ ಪಡೆಯಬಹುದು.
- RuPay ಕಾರ್ಡ್:
ಹೊಸ ಕೆಸಿಸಿ ಕಾರ್ಡ್ಗಳು RuPay ಸೌಲಭ್ಯ ಹೊಂದಿದ್ದು, ರೈತರು ಎಟಿಎಂ ಮೂಲಕ ಹಣ ಪಡೆಯಲು ಮತ್ತು ಡಿಜಿಟಲ್ ಪಾವತಿ ಮಾಡಲು ಸಹಕಾರಿ.
➤
ಈ ಯೋಜನೆಯ ಫಲಾನುಭವಿಗಳು:
- ಸ್ವಂತ ಜಮೀನು ಹೊಂದಿರುವ ರೈತರು.
- ಬಾಡಿಗೆ ರೈತರು (Tenant Farmers) ಮತ್ತು ಹಂಚಿಕೆದಾರರು.
- ಸ್ವಸಹಾಯ ಸಂಘಗಳು (SHG) ಮತ್ತು ಜಂಟಿ ಹೊಣೆಗಾರಿಕೆ ಗುಂಪುಗಳು (JLG).
- ಮೀನುಗಾರರು ಮತ್ತು ಪಶುಪಾಲಕರು.
➤
ಪ್ರಸ್ತುತ ದೇಶದಲ್ಲಿ
7.72 ಕೋಟಿ ಸಕ್ರಿಯ ಕೆಸಿಸಿ ಕಾರ್ಡ್ಗಳಿದ್ದು
, ಸುಮಾರು 10.2 ಲಕ್ಷ ಕೋಟಿ ರೂ. ಸಾಲ ಚಾಲ್ತಿಯಲ್ಲಿದೆ. ಒಟ್ಟು 457 ಬ್ಯಾಂಕ್ಗಳು (ವಾಣಿಜ್ಯ, ಪ್ರಾದೇಶಿಕ ಗ್ರಾಮೀಣ ಮತ್ತು ಸಹಕಾರಿ ಬ್ಯಾಂಕ್ಗಳು) ಈ ಸೇವೆಯನ್ನು ನೀಡುತ್ತಿವೆ. ವಿಶೇಷವಾಗಿ ಸಹಕಾರಿ ಬ್ಯಾಂಕ್ಗಳು ಗ್ರಾಮೀಣ ಮಟ್ಟದಲ್ಲಿ ಹೆಚ್ಚಿನ ಸಂಖ್ಯೆಯ ಅರ್ಜಿಗಳನ್ನು ವಿಲೇವಾರಿ ಮಾಡಿವೆ.
➤
ಆರ್.ವಿ. ಗುಪ್ತಾ ಸಮಿತಿಯ ಶಿಫಾರಸಿನಂತೆ 1998 ರಲ್ಲಿ ಆರಂಭವಾದ ಕಿಸಾನ್ ಕ್ರೆಡಿಟ್ ಕಾರ್ಡ್ (KCC) ಯೋಜನೆಯು, 2006-07 ರ ಬಡ್ಡಿ ಸಬ್ಸಿಡಿ (MISS) ಮತ್ತು 2020 ರ ಪರಿಷ್ಕೃತ ಡಿಜಿಟಲ್ ಸುಧಾರಣೆಗಳ ಮೂಲಕ ರೈತರ ಬೆಳೆ ಉತ್ಪಾದನೆ ಹಾಗೂ ಕೃಷಿ ಸಂಬಂಧಿತ ತುರ್ತು ಆರ್ಥಿಕ ಅಗತ್ಯಗಳಿಗೆ ರಿಯಾಯಿತಿ ದರದಲ್ಲಿ ಹಣಕಾಸಿನ ನೆರವು ಒದಗಿಸುವ ಪ್ರಮುಖ ಗುರಿಯನ್ನು ಹೊಂದಿದೆ.
Take Quiz
Loading...