Loading..!
KPSC Vaani
Login
My Orders
My Cart
Shorts
Job news
Current Affairs
Buy books
Practice Papers
Quizzes
Question Papers
Institutes
Flash news
Cut Offs
Blogs
Study Materials
Contact Us
About Us
More
Study Materials
Cut Offs
Blogs
Contact Us
Upload file
About Us
Login
Register
×
Warning!
Enter minimum 2 characters.
Back
ಪ್ರಚಲಿತ ಘಟನೆಗಳು
ಬಂಡೀಪುರ ಅರಣ್ಯದಲ್ಲಿ ಎಐ ಕ್ರಾಂತಿ: ಪ್ರಾಣಿಗಳ ಚಲನವಲನ ಪತ್ತೆ ಹಚ್ಚಲು 10 ಕಿ.ಮೀ ವ್ಯಾಪ್ತಿಯ ಸ್ಮಾರ್ಟ್ ಕ್ಯಾಮೆರಾ!
Authored by:
Akshata Halli
Date:
2 ಮಾರ್ಚ್ 2026
➤
ಚಾಮರಾಜನಗರ:
ಕಾಡಿನಿಂದ ನಾಡಿಗೆ ಬರುವ ವನ್ಯಪ್ರಾಣಿಗಳ ಹಾವಳಿ ತಡೆಯಲು ಅರಣ್ಯ ಇಲಾಖೆ ಈಗ ಹೈಟೆಕ್ ಮೊರೆ ಹೋಗಿದೆ. ದೇಶದಲ್ಲೇ ಮೊದಲ ಬಾರಿಗೆ
ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದಲ್ಲಿ
ಕೃತಕ ಬುದ್ಧಿಮತ್ತೆ (Artificial Intelligence - AI) ಆಧಾರಿತ ಥರ್ಮಲ್ ಕ್ಯಾಮೆರಾಗಳನ್ನು ಅಳವಡಿಸುವ ಮೂಲಕ ಹೊಸ ಇತಿಹಾಸ ಬರೆಯಲಾಗಿದೆ. ಬಂಡೀಪುರದ ಜಿ.ಎಸ್. ಬೆಟ್ಟ (G.S. Betta) ವಲಯದ ಎತ್ತರದ ಪ್ರದೇಶದಲ್ಲಿ ಪ್ರಾಯೋಗಿಕವಾಗಿ ಈ ನೂತನ ತಂತ್ರಜ್ಞಾನವನ್ನು ಅಳವಡಿಸಲಾಗಿದೆ. ಇದು ಕೇವಲ ಸಾಮಾನ್ಯ ಕ್ಯಾಮೆರವಲ್ಲ, ಬದಲಿಗೆ ಪ್ರಾಣಿಗಳ ಚಲನವಲನವನ್ನು ಸೆರೆಹಿಡಿದು ತಕ್ಷಣವೇ ಮಾಹಿತಿ ರವಾನಿಸುವ ಸ್ಮಾರ್ಟ್ ವ್ಯವಸ್ಥೆಯಾಗಿದೆ.
➤
ಈ ತಂತ್ರಜ್ಞಾನದ ಪ್ರಮುಖ ವಿಶೇಷತೆಗಳು:
- ಈ ಕ್ಯಾಮೆರಾಗಳು ಸುಮಾರು 10 ಕಿಲೋಮೀಟರ್ ದೂರದಿಂದಲೇ ಕಾಡುಪ್ರಾಣಿಗಳ ಚಲನವಲನವನ್ನು ಪತ್ತೆಹಚ್ಚುವ ಸಾಮರ್ಥ್ಯ ಹೊಂದಿವೆ.
- ಪ್ರಾಣಿಗಳ ದೇಹದ ಶಾಖವನ್ನು ಆಧರಿಸಿ ಚಿತ್ರಗಳನ್ನು ಸೆರೆಹಿಡಿಯುವುದರಿಂದ, ದಟ್ಟ ಅಡವಿ ಅಥವಾ ಕತ್ತಲೆಯಲ್ಲೂ ಪ್ರಾಣಿಗಳನ್ನು ನಿಖರವಾಗಿ ಗುರುತಿಸಬಹುದು.
- 360 ಡಿಗ್ರಿ ಕಣ್ಗಾವಲು: ಕ್ಯಾಮೆರಾ ಸುತ್ತಲೂ ತಿರುಗುವ ಮೂಲಕ ಹದ್ದಿನ ಕಣ್ಣಿಡಲಿದ್ದು, ಹುಲಿ, ಚಿರತೆ, ಆನೆ ಸೇರಿದಂತೆ ಅಪಾಯಕಾರಿ ಪ್ರಾಣಿಗಳ ಸ್ಪಷ್ಟ ಚಿತ್ರಗಳನ್ನು ಸಂಗ್ರಹಿಸುತ್ತದೆ.
- ಪ್ರಾಣಿಗಳು ಕಾಡಿನಿಂದ ನಾಡಿನತ್ತ ಬರುತ್ತಿವೆ ಎಂದು ತಿಳಿದ ತಕ್ಷಣ, ಕಮಾಂಡ್ ಸೆಂಟರ್ಗೆ ಮಾಹಿತಿ ರವಾನೆಯಾಗುತ್ತದೆ. ಇದರಿಂದ ಅರಣ್ಯ ಸಿಬ್ಬಂದಿ ಕೂಡಲೇ ಸ್ಥಳಕ್ಕೆ ಧಾವಿಸಿ ಪ್ರಾಣಿಗಳನ್ನು ಮರಳಿ ಕಾಡಿಗೆ ಅಟ್ಟಲು ಸಾಧ್ಯವಾಗುತ್ತದೆ.
➤
ಇತ್ತೀಚಿನ ದಿನಗಳಲ್ಲಿ ಚಾಮರಾಜನಗರ ಸೇರಿದಂತೆ ರಾಜ್ಯದ ವಿವಿಧೆಡೆ ಆನೆ ಮತ್ತು ಚಿರತೆ ದಾಳಿಯಿಂದ ರೈತರು ಹಾಗೂ ಜಾನುವಾರುಗಳು ಬಲಿಯಾಗುತ್ತಿವೆ. ಬೆಳೆ ಹಾನಿಯೂ ಹೆಚ್ಚುತ್ತಿದೆ. ಇದಕ್ಕೆ ಪ್ರತಿಯಾಗಿ ಮಾನವರು ಕೂಡ ಪ್ರಾಣಿಗಳಿಗೆ ಹಾನಿ ಮಾಡುವ ಘಟನೆಗಳು ಸಂಭವಿಸುತ್ತಿವೆ.
➤
ಬಂಡೀಪುರ ಹುಲಿ ಯೋಜನೆ ನಿರ್ದೇಶಕ
ಪ್ರಭಾಕರನ್
ಅವರ ಪ್ರಕಾರ, "ಈ ಎಐ ತಂತ್ರಜ್ಞಾನವು ಪ್ರಾಯೋಗಿಕವಾಗಿ ಯಶಸ್ವಿಯಾದರೆ, ಮುಂದಿನ ದಿನಗಳಲ್ಲಿ ಸಂಘರ್ಷ ಹೆಚ್ಚಿರುವ ಬಂಡೀಪುರದ ಇತರ ವಲಯಗಳಿಗೂ ಇದನ್ನು ವಿಸ್ತರಿಸಲಾಗುವುದು."
Take Quiz
Loading...