* ವಿಶ್ವ ನಂ.1 ಆಟಗಾರ ಇಟಲಿಯ ಯಾನ್ನಿಕ್ ಸಿನ್ನರ್ 2025ರ ವಿಂಬಲ್ಡನ್ ಪುರುಷರ ಸಿಂಗಲ್ಸ್ನಲ್ಲಿ ತನ್ನ ಮೊದಲ ಪ್ರಶಸ್ತಿ ಜಯಿಸಿದರು.* ಫೈನಲ್ನಲ್ಲಿ ಸ್ಪೇನ್ನ ಕಾರ್ಲೋಸ್ ಆಲ್ಕರಜ್ ವಿರುದ್ಧ 4-6, 6-4, 6-4, 6-4 ಸೆಟ್ಗಳಲ್ಲಿ ಗೆದ್ದರು.* 2023, 2024ರಲ್ಲಿ ವಿಂಬಲ್ಡನ್ ಜಯಿಸಿದ್ದ ಆಲ್ಕರಜ್ ಈ ಬಾರಿಗೆ ಹ್ಯಾಟ್ರಿಕ್ ಸಾಧನೆಯ ಕನಸು ಕಂಡಿದ್ದರು. ಆದರೆ ಸಿನ್ನರ್ ವಿರುದ್ಧ ಸೋತು, ಅವರ 20 ಜಯಗಳ ಸರಣಿಗೂ ತೆರೆ ಬಿತ್ತು.* ಇದು ಸಿನ್ನರ್ಗೆ ಈ ವರ್ಷದ 2ನೇ ಮತ್ತು ಒಟ್ಟಾರೆ 4ನೇ ಗ್ರ್ಯಾಂಡ್ ಸ್ಲಾಂ. ಫ್ರೆಂಚ್ ಓಪನ್ನಲ್ಲಿ ಆಲ್ಕರಜ್ಗೆ ಸೋತಿದ್ದ ಸಿನ್ನರ್, ಲಂಡನ್ನಲ್ಲಿ ಅದಕ್ಕೆ ಸೇಡು ತೀರಿಸಿದರು.* ಸಿನ್ನರ್ ಗೆದ್ದ ಹಣದ ಬಹುಮಾನ ರೂ. 34.75 ಕೋಟಿ, ಆಲ್ಕರಜ್ಗೆ ರೂ. 17.61 ಕೋಟಿ ದೊರೆಯಿತು.* ವೆರೋನಿಕಾ ಕುಡೆರ್ಮೆಟೋವಾ (ರಷ್ಯಾ) ಮತ್ತು ಎಲಿಸ್ ಮೆರ್ಟೆನ್ಸ್ (ಬೆಲ್ಜಿಯಂ) ಜೋಡಿ ಮಹಿಳಾ ಡಬಲ್ಸ್ ಪ್ರಶಸ್ತಿ ಗೆದ್ದರು. ಅವರು ಹ್ಸೀವ್ ಸು-ವೀ ಮತ್ತು ಜೆಲೆನಾ ಒಸ್ಪಾಪೆಂಕೊ ವಿರುದ್ಧ 3-6, 6-2, 6-4 ಸೆಟ್ಗಳಲ್ಲಿ ಜಯ ಸಾಧಿಸಿದರು.* ತಮಿಳುನಾಡಿನ 24 ವರ್ಷದ ಹರಿಕೃಷ್ಣನ್ ಭಾರತದಿಂದ 87ನೇ ಗ್ರ್ಯಾಂಡ್ ಮಾಸ್ಟರ್ ಆಗಿ ಹೊರಹೊಮ್ಮಿದ್ದಾರೆ.