* ಕೇಂದ್ರ ಸರಕಾರವು ಈಗಾಗಲೇ ಚಂದ್ರಯಾನ 4ಕ್ಕೆ ಅನುಮೋದನೆ ನೀಡಿದ್ದು, ಚಂದ್ರಯಾನ 4ರ ಮೂಲಕ ಚಂದ್ರನ ದಕ್ಷಿಣ ಧ್ರುವಕ್ಕೆ ಹೋಗಿ ಕೆಲವು ಮಾದರಿಗಳನ್ನು ಸಂಗ್ರಹ ಮಾಡಲಿದ್ದೇವೆ ಎಂದು ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಅಧ್ಯಕ್ಷ ಸೋಮನಾಥ್ ಅವರು ತಿಳಿಸಿದ್ದಾರೆ.* ನಾಸಾ-ಇಸ್ರೋ ಸಹಯೋಗದ ಮಹತ್ವಾಕಾಂಕ್ಷೆಯ ಮಾನವ ಸಹಿತ ಗಗನಯಾನ ನೌಕೆ 2026ರ ಅಂತ್ಯದ ವೇಳೆಗೆ ನಭಕ್ಕೆ ಹಾರಲಿದೆ. ಮಾನವರಹಿತ ಮೊದಲ ರಾಕೆಟ್ ಉಡಾವಣೆಯು 2025ರ ಆರಂಭದಲ್ಲಿ ನಡೆಯಲಿದೆ ಎಸ್. ಸೋಮನಾಥ್ ಅವರು ತಿಳಿಸಿದ್ದಾರೆ.* ಗಗನಯಾನ ಯೋಜನೆಯು ಮೂರು ದಿನಗಳ ಕಾರ್ಯಾಚರಣೆಯಾಗಿದ್ದು, ಮಾನವಸಹಿತ ಗಗನಯಾನ ನೌಕೆಯು ಭೂಮಿಯ ಮೇಲಿಂದ 400 ಕಿ.ಮೀ ಎತ್ತರಕ್ಕೆ ಹಾರಲಿದ್ದು, ಭಾರತದ ಮಾನವ ಬಾಹ್ಯಾಕಾಶ ಹಾರಾಟದ ಸಾಮರ್ಥ್ಯವನ್ನು ಪ್ರದರ್ಶಿಸಲಿದ್ದೇವೆ ಎಂದಿದ್ದಾರೆ.* ಇದು 90 ಶತಕೋಟಿ ವೆಚ್ಚದ ಯೋಜನೆಯಾಗಿದ್ದು, ಸೋವಿಯತ್ ಒಕ್ಕೂಟ, ಅಮೆರಿಕ, ಚೀನಾ ನಂತರ ಬಾಹ್ಯಾಕಾಶಕ್ಕೆ ಮಾನವನನ್ನು ಕಳಿಸಿದ ನಾಲ್ಕನೇ ರಾಷ್ಟ್ರ ಎಂಬ ಹೆಗ್ಗಳಿಕೆಗೆ ಭಾರತ ಪಾತ್ರವಾಗಲಿದೆ.* ಚಂದ್ರಯಾನ-4 ಐದು ವಿಭಿನ್ನ ಮಾಡ್ಯೂಲ್ಗಳನ್ನು ಒಳಗೊಂಡಿರುತ್ತದೆ: ಅಸೆಂಡರ್ ಮಾಡ್ಯೂಲ್ (AM), ಡಿಸೆಂಡರ್ ಮಾಡ್ಯೂಲ್ (DM), ರೀ-ಎಂಟ್ರಿ ಮಾಡ್ಯೂಲ್ (RM), ಟ್ರಾನ್ಸ್ಫರ್ ಮಾಡ್ಯೂಲ್ (TM), ಮತ್ತು ಪ್ರೊಪಲ್ಷನ್ ಮಾಡ್ಯೂಲ್ (PM).* ಸಾಂಪ್ರದಾಯಿಕ ಏಕ-ಉಡಾವಣಾ ಕಾರ್ಯಾಚರಣೆಗಳಿಂದ ನಿರ್ಗಮನದಲ್ಲಿ, ಎರಡು ಪ್ರತ್ಯೇಕ LVM3 ಉಡಾವಣಾ ವಾಹನಗಳನ್ನು ಬಳಸಿಕೊಂಡು ಈ ಘಟಕಗಳನ್ನು ಬಾಹ್ಯಾಕಾಶಕ್ಕೆ ಕಳುಹಿಸಲು ಇಸ್ರೋ ಯೋಜಿಸಿದೆ.