* ಶ್ರೀಹರಿಕೋಟಾದಲ್ಲಿ ರಾಕೆಟ್ ಉಡಾವಣೆಗಾಗಿ ಕೌಂಟ್‌ಡೌನ್‌ಗಳಿಗೆ ಧ್ವನಿ ನೀಡಿದ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ವಿಜ್ಞಾನಿ ಎನ್ ವಲರಮತಿ ಅವರು ಹೃದಯಾಘಾತದಿಂದ ನಿಧನರಾಗಿದ್ದಾರೆ.* ವಲರಮತಿ ಅವರು ತಮಿಳುನಾಡಿನ ಅರಿಯಲೂರು ಮೂಲದವರಾದ ಇವರು ಜುಲೈ 31, 1959 ರಂದು ಜನಿಸಿದರು, 1984 ರಲ್ಲಿ ISRO ಗೆ ಸೇರಿದರು. ಅವರು RISAT-1 ರ ಯೋಜನಾ ನಿರ್ದೇಶಕರಾಗಿದ್ದರು, RISAT-1 ಇದು ಭಾರತದ ಮೊದಲ ಸ್ಥಳೀಯವಾಗಿ ಅಭಿವೃದ್ಧಿಪಡಿಸಿದ ರಾಡಾರ್ ಇಮೇಜಿಂಗ್ ಉಪಗ್ರಹ ಮತ್ತು ದೇಶದ ಎರಡನೇ ಅಂತಹ ಉಪಗ್ರಹವಾಗಿದೆ.* "ಚಂದ್ರಯಾನ 3 ಸೇರಿದಂತೆ ಅನೇಕ @isro ಉಡಾವಣಾ ಕೌಂಟ್‌ಡೌನ್‌ಗಳ ಹಿಂದಿನ ಧ್ವನಿ ಎನ್ ವಲರಮತಿ ಜಿ ಅವರ ನಿಧನದ ಬಗ್ಗೆ ಕೇಳಲು ದುಃಖವಾಗಿದೆ" ಎಂದು ವಾಣಿಜ್ಯೋದ್ಯಮ, ಕೌಶಲ್ಯ ಅಭಿವೃದ್ಧಿ, ಎಲೆಕ್ಟ್ರಾನಿಕ್ಸ್ ಮತ್ತು ತಂತ್ರಜ್ಞಾನ ರಾಜ್ಯ ಸಚಿವರು ಹೇಳಿದ್ದಾರೆ.