Job Description: * ಚಂದ್ರನ ದಕ್ಷಿಣ ಧ್ರುವದ ಮೇಲ್ಮನಲ್ಲಿ ವೈಜ್ಞಾನಿಕ ಅನ್ವೇಷಣೆ ನಡೆಸುತ್ತಿರುವ ಚಂದ್ರಯಾನ-3 ಗಂಧಕ ಇರುವುದನ್ನು ಪತ್ತೆ ಮಾಡಿದೆ ಎಂದು ಇಸ್ರೋ (ISRO) ತಿಳಿಸಿದೆ. * ಚಂದ್ರನ ದಕ್ಷಿಣ ಧ್ರುವದ ಮೇಲ್ಮನಲ್ಲಿ ಅಲ್ಯುಮಿನಿಯಂ (ಎಎಲ್), ಕ್ಯಾಲ್ಸಿಯಂ,ಕಬ್ಬಿಣ, ಕ್ರೋಮಿಯಂ, ಟೈಟೆನಿಯಂ, ಮ್ಯಾಂಗನೀಸ್, ಸಿಲಿಕಾನ್ ಮತ್ತು ಆಮ್ಲಜನಕ ಧಾತುಗಳು ಪತ್ತೆಯಾಗಿದ್ದು, ಹಾಗೂ ಜಲಜನಕ ಧಾತುವಿನ ವೈಜ್ಞಾನಿಕ ಅನ್ವೇಷಣೆಯ ಕಾರ್ಯ ನಡೆಯುತ್ತಿದೆ. * ಚಂದ್ರಯಾನ-3 ರ ಪ್ರಜ್ಞಾನ್‌ನಲ್ಲಿರುವ ಲಿಬ್ ಉಪಕರಣವು ಈ ಧಾತುಗಳನ್ನು ಪತ್ತೆ ಮಾಡಿದ್ದು, ಲಿಬ್ (ಲೇಸರ್ ಇಂಡ್ಯೂಸ್ ಬ್ರೇಕ್‌ಡೌನ್‌ ಸ್ಪೆಕ್ಕೊ ಸ್ಕೋಪ್) ಉಪಕರಣವನ್ನು ಬೆಂಗಳೂರಿನ ಎಲೆಕ್ಟ್ ಆಪ್ಟಿಕ್ಸ್ ಸಿಸ್ಟಮ್ ಪ್ರಯೋಗಾಲಯ ಅಭಿವೃದ್ಧಿ ಪಡಿಸಿತ್ತು.