* ಭಾರತದ ಚಂದ್ರಯಾನ-3 ಯಶಸ್ವಿಯಾಗಿ ಚಂದ್ರನ ದಕ್ಷಿಣ ಧ್ರುವದಲ್ಲಿ ಇಳಿದು, ಮಹತ್ವದ ಮಾಹಿತಿಗಳನ್ನು ಮತ್ತು ಚಿತ್ರಗಳನ್ನು ಕಳುಹಿಸಿದೆ. ಚಂದ್ರನ ಧ್ರುವ ಪ್ರದೇಶದಲ್ಲಿ ಮಂಜುಗಡ್ಡೆ ಇದೆ ಎಂದು ಚಂದ್ರಯಾನ ಕಾರ್ಯಾಚರಣೆಯ ಇತ್ತೀಚಿನ ಸಂಶೋಧನೆಗಳು ದೃಢಪಡಿಸಿವೆ.* ಇದು ಭವಿಷ್ಯದಲ್ಲಿ ಕೈಗೊಳ್ಳಬಹುದಾದ ಇನ್ನಿತರ ಯೋಜನೆಗಳಿಗೆ, ಸಂಶೋಧನೆಗಳಿಗೆ ಪೂರಕವಾಗಿರಲಿದೆ.* ಚಂದ್ರನ ಮೇಲೆಯಲ್ಲಿ ಅತಿ ಹೆಚ್ಚಿನ ನಿರ್ವಾತ ವಾತಾವರಣ ಇರುವುದರಿಂದ ನೀರು ಇರಲು ಅಸಾಧ್ಯ. ಹಾಗಾಗಿ ಮಂಜುಗಡ್ಡೆ ಇದೆ. ಪೂರ್ವ ಅಂದಾಜಿಗಿಂತ ಹೆಚ್ಚಿನ ಪ್ರಮಾಣದಲ್ಲಿರಬಹುದು.* ChaSTE ತಂತ್ರಜ್ಞಾನವು ಹೆಚ್ಚು ನೀರು ಮತ್ತು ಮಂಜುಗಡ್ಡೆ ಹೊಂದಿರುವ ಪ್ರದೇಶಗಳನ್ನು ಅಧ್ಯಯನ ಮಾಡುವ ಭರವಸೆ ನೀಡುತ್ತಿದೆ. ಇದರಿಂದ ಧ್ರುವಗಳಿಗೆ ಸಮೀಪವಿರುವ ಪ್ರದೇಶಗಳ ಜೊತೆಗೆ ಇತರ ಸ್ಥಳಗಳಲ್ಲಿ ಸಂಶೋಧನೆ ನಡೆಸಲಿರುವ ಅಡಚಣೆಗಳು ಮತ್ತು ಆತಂಕಗಳು ಕಡಿಮೆಯಾಗುತ್ತವೆ.* ಚಂದ್ರನ ಮೇಲ್ಮೈಯಲ್ಲಿ ಹೆಚ್ಚಿನ ನಿರ್ವಾತದ ವಾತಾವರಣ ಇರುವುದರಿಂದ ಮಂಜುಗಡ್ಡೆ ನೀರಾಗಿ ಕರಗುವ ಬದಲು ನೇರವಾಗಿ ಅನಿಲವಾಗಿ ಬದಲಾಗುತ್ತದೆ.* ChaSTE : ಚಂದ್ರಯಾನ ಮಿಷನ್ನಲ್ಲಿ ಚಂದ್ರನ ಮೇಲ್ಮಯ ಉಷ್ಣತೆ ಮತ್ತು ತಾಪಮಾನವನ್ನು ಅಳೆಯಲು ChaSTE ಅನ್ನು ವಿನ್ಯಾಸಗೊಳಿಸಲಾಗಿದೆ. ಇದು ಚಂದ್ರನ ಮೇಲೆ ಮತ್ತು ಅದರ ಕೆಳಗೆ 10 ಸೆಂ.ಮೀ.ಗಳವರೆಗೆ ತಾಪಮಾನವನ್ನು ಅಳೆಯುವ ಮೂಲಕ ತಾಪಮಾನದಲ್ಲಿ ಆಗುವ ವ್ಯತ್ಯಾಸ ಕಂಡು ಹಿಡಿದಿದೆ.* ಹಗಲಿನಲ್ಲಿ 82 ಡಿಗ್ರಿ ಸೆಲ್ಸಿಯಸ್ ಹಾಗೂ ರಾತ್ರಿಯಲ್ಲಿ -170 ಡಿಗ್ರಿ ಸೆಲ್ಸಿಯಸ್ ತಾಪಮಾನವಿರುವುದನ್ನು ಪತ್ತೆ ಮಾಡಲಾಗಿದೆ. ಹಿಮಗಡ್ಡೆಯ ರಚನೆಯನ್ನು ಗ್ರಹಿಸಲು ಈ ತಾಪಮಾನ ಏರಿಳಿತಗಳು ನಿರ್ಣಾಯಕವಾಗಿವೆ.