* ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್ಡಿಒ) ಮತ್ತು ಭಾರತೀಯ ನೌಕಾಪಡೆಯು ಒಡಿಶಾದ ಚಂಡಿಪುರದಲ್ಲಿರುವ ಇಂಟಿಗ್ರೇಟೆಡ್ ಟೆಸ್ಟ್ ರೇಂಜ್ (ಐಟಿಆರ್) ನಿಂದ ಮೊದಲ ಪ್ರಯೋಗ ನೌಕಾ ಹಡಗು ವಿರೋಧಿ ಕ್ಷಿಪಣಿಯನ್ನು (ಎನ್ಎಎಸ್ಎಂ-ಎಸ್ಆರ್) ಯಶಸ್ವಿಯಾಗಿ ಪರೀಕ್ಷಿಸಿತು.* ಭಾರತೀಯ ನೌಕಾಪಡೆಯ 'ಸೀ ಕಿಂಗ್ ಹೆಲಿಕಾಪ್ಟರ್' ಮಂಗಳವಾರ(ಫೆ.25) ಕ್ಷಿಪಣಿಯನ್ನು ಉಡಾಯಿಸಿ ಹಡಗಿನ ಗುರಿಗೆ ತನ್ನ ಸಾಮರ್ಥ್ಯವನ್ನು ಪ್ರದರ್ಶಿಸಿತು.* ರಕ್ಷಣಾ ಸಚಿವ ರಾಜನಾಥ್ ಸಿಂಗ್ ಯಶಸ್ವಿ ಕ್ಷಿಪಣಿ ಪರೀಕ್ಷೆಗೆ ಡಿಆರ್ಡಿಒ ಮತ್ತು ನೌಕಾಪಡೆಯನ್ನು ಅಭಿನಂದಿಸಿದ್ದಾರೆ. ಕ್ಷಿಪಣಿ 'ಸಮುದ್ರ-ಸ್ಕಿಮ್ಮಿಂಗ್ ಮೋಡ್' ನಲ್ಲಿ ಗರಿಷ್ಠ ವ್ಯಾಪ್ತಿಯಲ್ಲಿ ಸಣ್ಣ ಹಡಗಿನ ಗುರಿಯ ಮೇಲೆ ನೇರ ಹೊಡೆತವನ್ನು ಸಾಧಿಸಿದೆ ಇದು ಸ್ಥಳೀಯ 'ಇಮೇಜಿಂಗ್ ಇನ್ಫ್ರಾ-ರೆಡ್ ಸೀಕರ್' ಬಳಸಿ ಗುರಿ ತಲುಪುತ್ತದೆ.* ಹಾರಾಟದ ವೇಳೆ ಪೈಲಟ್ಗೆ ನೇರವಾಗಿ ಚಿತ್ರಗಳನ್ನು ಕಳುಹಿಸುವ ಮರು-ಗುರಿ ಪರೀಕ್ಷೆ ಯಶಸ್ವಿಯಾಗಿದೆ.