* ದಿವಂಗತ ಚಮನ್ ಅರೋರಾ ಅವರ 'ಇಕ್ ಹೋರ್ ಅಶ್ವತ್ಥಾಮ' ದಿ ಸಣ್ಣ ಕಥೆ ಮ ಕೃತಿಗೆ 2024ರ ಡೋಗ್ರಿ ಭಾಷಾ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯನ್ನು ಮರಣೋತ್ತರವಾಗಿ ನೀಡುವುದಾಗಿ ಸರಕಾರ ಘೋಷಿಸಿದೆ.* ಮಾರ್ಚ್ 8ರಂದು ಹೊಸದಿಲ್ಲಿಯಲ್ಲಿ ನಡೆಯುವ ಸಮಾರಂಭದಲ್ಲಿ ಚಮನ್ ಅವರ ಕುಟುಂಬ ಸದಸ್ಯರಿಗೆ ಪ್ರಶಸ್ತಿಯನ್ನು ಪ್ರದಾನ ಮಾಡಲಾಗುತ್ತದೆ.* ಪ್ರಶಸ್ತಿಯು 1 ಲಕ್ಷ ರೂ. ನಗದು ಬಹುಮಾನ ಹಾಗೂ ತಾಮ್ರದ ಫಲಕವನ್ನು ಒಳಗೊಂಡಿರಲಿದೆ.* ಡೋಗ್ರಿ ಎಂಬುದು ಜಮ್ಮು ಕಾಶ್ಮೀರ, ಉತ್ತರ ಭಾರತದ ಹಲವು ಕಡೆಗಳಲ್ಲಿ ಮಾತನಾಡುವ ಭಾಷೆಯಾಗಿದ್ದು, ವಿಶಿಷ್ಟವಾದ ಜಾನಪದ ಸಂಪ್ರದಾಯವನ್ನು ಒಳಗೊಂಡಿದೆ. ಇದನ್ನು ಸಂರಕ್ಷಿಸುವ ದೃಷ್ಟಿಯಿಂದ ಆ ಪ್ರದೇಶದ ಸಾಹಿತಿಗಳನ್ನು ಗುರುತಿಸಿ ಗೌರವಿಸಲಾಗುತ್ತಿದೆ.