* ಸಂಸತ್ತಿನ ಚಳಿಗಾಲದ ಅಧಿವೇಶನವು ನಿಗದಿತ ಅವಧಿಗಿಂತ ಒಂದು ದಿನ ಮೊದಲೇ ಕೊನೆಗೊಂಡಿದ್ದು ಉಭಯ ಸದನಗಳ ಕಲಾಪವನ್ನು ಡಿಸೆಂಬರ್ 21 ರಂದು ಅನಿರ್ದಿಷ್ಟಾವಧಿಗೆ ಮುಂದೂಡಲಾಗಿದೆ.* ಈ ಬಾರಿಯ ಅಧಿವೇಶನವು ಗಂಭೀರ ಭದ್ರತಾ ಲೋಪ 146 ಸಂಸದರ ಅಮಾನತು, ಲಂಚ ಪಡೆದ ಪ್ರಕರಣದಲ್ಲಿ ಟಿಎಂಸಿ ನಾಯಕಿ ಮಹುವಾ ಮೊಯಿತ್ರಾ ಅವರ ಉಚ್ಚಾಟನೆಯಂತಹ ಘಟನೆಗಳಿಗೆ ಸಾಕ್ಷಿಯಾಯಿತು.* ಕ್ರಿಮಿನಲ್‌ ಅಪರಾಧಗಳಿಗೆ ಸಂಬಂಧಿಸಿದ ಕಾನೂನುಗಳಲ್ಲಿ ಅಮೂಲಾಗ್ರ ಬದಲಾವಣೆಯನ್ನು ತರುವ ಉದ್ದೇಶದಿಂದ ಭಾರತೀಯ ದಂಡ ಸಂಹಿತೆ (ಐಪಿಸಿ), ಅಪರಾಧ ದಂಡಪ್ರಕ್ರಿಯಾ ಸಂಹಿತೆ ಮತ್ತು ಭಾರತೀಯ ಸಾಕ್ಷ್ಯ ಕಾಯ್ದೆಯನ್ನು ಬದಲು ಮಾಡುವ ಮೂರು ಮಸೂದೆಗಳನ್ನು ರಾಜ್ಯಸಭೆ ಡಿಸೆಂಬರ್ 21 ರಂದು ಅಂಗೀಕರಿಸಿತು. * ಚಳಿಗಾಲದ ಅಧಿವೇಶನವು ಇದೇ ಡಿಸೆಂಬರ್ 4ರಂದು ಆರಂಭಗೊಂಡಿದ್ದು ಡಿಸೆಂಬರ್ 22ರವರೆಗೆ (ಶುಕ್ರವಾರದವರೆಗೆ) ನಿಗದಿಯಾಗಿತ್ತು.* ಚಳಿಗಾಲದ ಅಧಿವೇಶನದಲ್ಲಿ ಅನುಚಿತ ನಡವಳಿಕೆಗಾಗಿ ಲೋಕಸಭೆಯಲ್ಲಿ ಕಾಂಗ್ರೆಸ್ ಸಂಸದರಾದ ಡಿ.ಕೆ. ಸುರೇಶ್, ದೀಪಕ್ ಬೈಜ್ ಮತ್ತು ನಕುಲ್ ನಾಥ್ ಅವರನ್ನು ಡಿಸೆಂಬರ್ 22 ರಂದು ಅಮಾನತು ಮಾಡಲಾಯಿತು. ಸದನದಲ್ಲಿ ಪ್ರತಿಭಟನೆ ನಡೆಸುವುದರ ವಿರುದ್ಧ ಕಲಾಪದ ಆರಂಭದಲ್ಲಿ ಸ್ಪೀಕರ್ ಓಂ ಬಿರ್ಲಾ ಅವರು ಈ ಮೂವರಿಗೆ ಎಚ್ಚರಿಕೆಯನ್ನೂ ನೀಡಿದ್ದರು.