- CISF ಗೆ ಮೊದಲ ಮಹಿಳಾ ಮುಖ್ಯಸ್ಥೆಯಾಗಿ ನೀನಾ ಸಿಂಗ್ ನೇಮಕ :* ಭಾರತ ದೇಶಾದ್ಯಂತ ಇರುವ ವಿಮಾನ ನಿಲ್ದಾಣಗಳಿಗೆ ಭದ್ರತೆ ಒದಗಿಸುವ ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆಗೆ(Central Industrial Security Force – CISF)ಗೆ ಮೊದಲ ಮಹಿಳಾ ಮುಖ್ಯಸ್ಥೆಯಾಗಿ IPS ಅಧಿಕಾರಿ ನೀನಾ ಸಿಂಗ್ ನೇಮಕಗೊಂಡಿದ್ದಾರೆ.* ಸಿಐಎಸ್‌ಎಫ್‌ನ ವಿಶೇಷ ಡಿಜಿಯಾಗಿ ಸೇವೆ ಸಲ್ಲಿಸುತ್ತಿದ್ದ ರಾಜಸ್ಥಾನ ಕೇಡರ್‌ನ 1989-ಬ್ಯಾಚ್‌ನ ಐಪಿಎಸ್ ಅಧಿಕಾರಿ ನೀನಾ ಸಿಂಗ್ ಅವರು ಕೈಗಾರಿಕಾ ಭದ್ರತಾ ಪಡೆಗೆ(CISF)ಗೆ ಡೈರೆಕ್ಟರ್ ಜನರಲ್ ಹುದ್ದೆಗೆ ಏರಿದ ಮೊದಲ ಮಹಿಳೆಯಾಗಿದ್ದಾರೆ.*  ಕ್ಯಾಬಿನೆಟ್ ನೇಮಕಾತಿ ಸಮಿತಿ 2024ರ ಜುಲೈ 31ರವರೆಗೆ CISF ನ DG ಯಾಗಿ ನೀನಾ ಸಿಂಗ್ ಅವರ ನೇಮಕಾತಿಯನ್ನು ಅನುಮೋದಿಸಲಾಗಿದೆ.- CRPF ನ ಮಹಾನಿರ್ದೇಶಕರಾಗಿ ದಯಾಳ್ ಸಿಂಗ್ ನೇಮಕ :* 1988ರ ಬ್ಯಾಚನ ಮಣಿಪುರ್-ಕೇಡರ್ IPS ಅಧಿಕಾರಿ ಅನೀಶ್ ದಯಾಳ್ ಸಿಂಗ್ ಅವರು ವಿಶ್ವದ ಅತಿ ದೊಡ್ಡ ಅರೆ ಸೇನಾ ಪಡೆಯಾದ ಕೇಂದ್ರೀಯ ಮೀಸಲು ಪೊಲೀಸ್ ಪಡೆ (CRPF)ನ ಮಹಾನಿರ್ದೇಶಕರಾಗಿ ನೇಮಕಗೊಂಡಿದ್ದಾರೆ.* ಇಂಡೋ-ಟಿಬೆಟಿಯನ್ ಬಾರ್ಡರ್ ಪೊಲೀಸ್ ಮುಖ್ಯಸ್ಥ ಮುಖ್ಯಸ್ಥರಾಗಿ ಅನೀಶ್ ದಯಾಳ್ ಸಿಂಗ್ ಅವರು ಸೇವೆ ಸಲ್ಲಿಸಿದ್ದಾರೆ.*  ಕ್ಯಾಬಿನೆಟ್ ನೇಮಕಾತಿ ಸಮಿತಿಯು ಡಿಸೆಂಬರ್ 31, 2024 ರವರೆಗೆ ಸಿಆರ್‌ಪಿಎಫ್‌ನ ಡಿಜಿ ಆಗಿ ದಯಾಳ್ ಸಿಂಗ್ ಅವರ ನೇಮಕಾತಿಯನ್ನು ಅನುಮೋದಿಸಿದೆ.- ITBPಗೆ ಮಹಾನಿರ್ದೇಶಕರಾಗಿ ರಾಹುಲ್ ರಸ್ಗೋತ್ರಾ  ನೇಮಕ :* 1989ರ ಬ್ಯಾಚನ ಮಣಿಪುರ್-ಕೇಡರ್ IPS ಅಧಿಕಾರಿ ರಾಹುಲ್ ರಸ್ಗೋತ್ರಾ ಅವರು ಸುಮಾರು ಸಾವಿರ ಸಿಬ್ಬಂದಿ ಬಲವನ್ನು ಹೊಂದಿರುವ ಇಂಡೋ-ಟಿಬೆಟಿಯನ್ ಬಾರ್ಡರ್ ಪೊಲೀಸ್(ITBP)ಯ ಮಹಾನಿರ್ದೇಶಕರಾಗಿ ನೇಮಕಗೊಂಡಿದ್ದಾರೆ.* 1989ರ ಬ್ಯಾಚನ ಮಣಿಪುರ್-ಕೇಡರ್ IPS ಅಧಿಕಾರಿ ರಾಹುಲ್ ರಸ್ಗೋತ್ರಾ ಅವರು ಸುಮಾರು ದಶಕಗಳ ಕಾಲ ಗುಪ್ತಚರ ಇಲಾಖೆಯಲ್ಲಿ ಪ್ರಮುಖ ಹುದ್ದೆಯನ್ನು ನಿರ್ವಹಿಸಿದ್ದಾರೆ.* ಐಪಿಎಸ್ ಅಧಿಕಾರಿಯಾದ ರಸ್ಗೋತ್ರ ಅವರನ್ನು ಸೆಪ್ಟೆಂಬರ್ 30, 2025 ರವರೆಗೆ ಅಂದರೆ ಅವರ ನಿವೃತ್ತಿಯ ದಿನಾಂಕದವರೆಗೆ ITBP ಯ ಮಹಾನಿರ್ದೇಶಕರಾಗಿ ನೇಮಿಸಲಾಗಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.