* ಅಮೆರಿಕದಲ್ಲಿ ನಡೆದಿದ್ದ ಸಿನ್ಸಿನ್ನಾಟಿ ಓಪನ್ ಟೆನಿಸ್ ಟೂರ್ನಿಯ ಪುರುಷರ ಸಿಂಗಲ್ಸ್ ಫೈನಲ್ನಲ್ಲಿ ಕಾರ್ಲೋಸ್ ಅಲ್ಕರಾಜ್ ಮತ್ತು ಮಹಿಳೆಯರ ಸಿಂಗಲ್ಸ್ ಫೈನಲ್ನಲ್ಲಿ ಇಗಾ ಸ್ವಿಯಾಟೆಕ್ ಗೆಲುವು ಸಾಧಿಸಿ ಚಾಂಪಿಯನ್ ಆಗಿ ಹೊರಹೊಮ್ಮಿದ್ದಾರೆ.* ಪ್ರಸ್ತುತ ವಿಶ್ವ ಟೆನಿಸ್ ನ ಎರಡನೇ ಶ್ರೇಯಾಂಕಿತ ಆಟಗಾರನಾಗಿರುವ ಕಾರ್ಲೋಸ್ ಅಲ್ಕರಾಝ್ ಅವರು ಲಿಂಡ್ನರ್ ಫ್ಯಾಮಿಲಿ ಟೆನಿಸ್ ಸೆಂಟರ್ನಲ್ಲಿ ನಡೆದ ಸಿನ್ಸಿನಾಟಿ ಓಪನ್ 2025 ರ ಫೈನಲ್ ಪಂದ್ಯದಲ್ಲಿ ವಿಶ್ವದ ನಂಬರ್ ಒನ್ ಜಾನಿಕ್ ಸಿನ್ನರ್ ಅವರನ್ನು ಸೋಲಿಸಿ ಹೊಸ ಇತಿಹಾಸ ನಿರ್ಮಿಸಿದರು. ಈ ಮೂಲಕ 22 ವರ್ಷದ ಅಲ್ಕರಾಝ್ ಅವರು ATP ಮಾಸ್ಟರ್ಸ್ 1000 ಟೂರ್ನಿಯಲ್ಲಿ ಮೊದಲ ಬಾರಿಗೆ ಪ್ರಶಸ್ತಿ ತಮ್ಮದಾಗಿಸಿಕೊಂಡರು.* ಪ್ರಸ್ತುತ ವಿಶ್ವ ಟೆನಿಸ್ ನ ಎರಡನೇ ಶ್ರೇಯಾಂಕಿತ ಆಟಗಾರನಾಗಿರುವ ಕಾರ್ಲೋಸ್ ಅಲ್ಕರಾಝ್ ಅವರು ಟೆನಿಸ್ ದಂತಕತೆ ಪೀಟ್ ಸಾಂಪ್ರಸ್ ಅವರ ದಾಖಲೆಯನ್ನು ಮುರಿದಿದ್ದಾರೆ. * ಯುಎಸ್ ಓಪನ್ ಪ್ರಾರಂಭವಾಗುವ ಮುನ್ನವೇ ಅಲ್ಕರಾಜ್ ಅಮೆರಿಕದ ನೆಲದಲ್ಲಿ ನಾಲ್ಕು ಪ್ರಮುಖ ಪ್ರಶಸ್ತಿಗಳನ್ನು ಗೆದ್ದ ಸಾಧನೆ ಮಾಡಿದ ಅಲ್ಕರಾಝ್ ಇದೀಗ ಪೀಟ್ ಸಾಂಪ್ರಸ್ ಅವರ 31 ವರ್ಷಗಳ ಹಿಂದಿನ ದಾಖಲೆಯನ್ನು ಮುರಿದರು. ಸಾಂಪ್ರಸ್ ಅವರು 1994ರಲ್ಲಿ ಈ ಸಾಧನೆ ಮಾಡಿದಾಗ ಅವರು 22 ವರ್ಷ ಮತ್ತು 7 ತಿಂಗಳಾಗಿತ್ತು. ಅಲ್ಕರಾಝ್ ಅವರು 22 ವರ್ಷ 3 ತಿಂಗಳಲ್ಲಿನಲ್ಲಿಯೇ ಈ ಸಾಧನೆ ಮೆರೆದಿದ್ದಾರೆ. * ಈನ್ಸಿನಾಟಿ ಓಪನ್ 2025 ರ ಪ್ರಶಸ್ತಿ ಗೆದ್ದು ಈ ಸಾಧನೆ ಮಾಡಿದ ಅತಿ ಕಿರಿಯ ಟೆನಿಸಿಗ ಎಂಬ ಅಭಿದಾನಕ್ಕೆ ಅಲ್ಕರಾಝ್ ಅವರು ಪಾತ್ರರಾಗಿದ್ದಾರೆ.* ಅಮೆರಿಕದ 4 ಪ್ರಮುಖ ಪ್ರಶಸ್ತಿಗಳನ್ನು ಗೆದ್ದ ಕಿರಿಯ ಆಟಗಾರರು : => ಕಾರ್ಲೋಸ್ ಅಲ್ಕರಾಝ್ 22 ವರ್ಷ (3 ತಿಂಗಳು) - 2025 ರಲ್ಲಿ => ಪೀಟ್ ಸಾಂಪ್ರಸ್ 22 ವರ್ಷ(7 ತಿಂಗಳು) - 1994 ರಲ್ಲಿ => ರೋಜರ್ ಫೆಡರರ್ 24 ವರ್ಷ - 2005 ರಲ್ಲಿ => ಆ್ಯಂಡ್ರೆ ಅಗಾಸಿ 30 ವರ್ಷ - 2001 ರಲ್ಲಿ => ನೊವಾಕ್ ಜೋಕೋವಿಚ್ 31 ವರ್ಷ - 2018 ರಲ್ಲಿ * ಇಷ್ಟೇ ಅಲ್ಲದೆ ಅಲ್ಕರಾಝ್ (22 ವರ್ಷ, 105 ದಿನಗಳು) ಅವರು ಎಂಟು ATP 1000 ಪ್ರಶಸ್ತಿಗಳನ್ನು ಗೆದ್ದ ವಿಶ್ವದ ಎರಡನೇ ಕಿರಿಯ ಆಟಗಾರ ಎಂಬ ಗೌರವಕ್ಕೂ ಪಾತ್ರರಾಗಿದ್ದಾರೆ. ರಾಫೆಲ್ ನಡಾಲ್ (20 ವರ್ಷ, 315 ದಿನಗಳು) ಮೊದಲ ಸ್ಥಾನದಲ್ಲಿದ್ದರೆ ನೊವಾಕ್ ಜೋಕೋವಿಕ್ (23 ವರ್ಷ, 344 ದಿನಗಳು) ಮತ್ತು ರೋಜರ್ ಫೆಡರರ್ (24 ವರ್ಷ, 6 ದಿನಗಳು) ಈ ಪಟ್ಟಿಯಲ್ಲಿ ನಂತರದ ಸ್ಥಾನಗಳಲ್ಲಿದ್ದಾರೆ.* ಮಹಿಳಾ ಫೈನಲ್ ಹೈಲೈಟ್: ಮಹಿಳಾ ಸಿಂಗಲ್ಸ್ ಫೈನಲ್ನಲ್ಲಿ ಇಟಲಿಯ ಜಾಸ್ಮಿನ್ ಪಿಯೋಲಿನಿ ಮತ್ತು ಪೋಲೆಂಡ್ನ ಇಗಾ ಸ್ವೀಯಾಟೆಕ್ ಮುಖಾಮುಖಿ ಆಗಿದ್ದರು. ಇಬ್ಬರೂ ಆಟಗಾರ್ತಿಯರು ಉತ್ತಮ ಪ್ರದರ್ಶನ ನೀಡಿದರು. ಆದರೆ, ಇಗಾ ಸ್ವೀಯಾಟೆಕ್ ಮೊದಲ ಸೆಟ್ ಅನ್ನು 7-5 ಅಂತರದಿಂದ ಗೆಲ್ಲುವ ಮೂಲಕ ಶುಭಾರಂಭ ಮಾಡಿದರು. ಎರಡನೇ ಸೆಟ್ನಲ್ಲಿ ಇಬ್ಬರ ನಡುವೆ ತೀವ್ರ ಪೈಪೋಟಿ ಏರ್ಪಟ್ಟಿತ್ತು.* ಕೊನೆಯಲ್ಲಿ, ಇಗಾ ಸ್ವಿಯಾಟೆಕ್ ಉತ್ತಮ ಆಟ ಪ್ರದರ್ಶಿಸಿ ಎರಡನೇ ಸೆಟ್ ಅನ್ನು ಸಹ 6-4 ಅಂತರದಿಂದ ಗೆದ್ದರು. ಇದರೊಂದಿಗೆ, ಇಕಾ ಸ್ವಿಯೆಟೆಕ್ ಜಾಸ್ಮಿನ್ ಪಿಯೋಲಿನಿ ಅವರನ್ನು 7-5, 6-4 ಅಂತರದಿಂದ ಸೋಲಿಸಿ ಚಾಂಪಿಯನ್ ಆಗಿ ಹೊರಹೊಮ್ಮಿದರು. ಈ ಗೆಲುವಿನೊಂದಿಗೆ, ಇಗಾ ಸ್ವಿಯೆಟೆಕ್ ಸಿನ್ಸಿನಾಟಿ ಓಪನ್ ಟೆನಿಸ್ 2025 ಸರಣಿಯಲ್ಲಿ ಮೊದಲ ಬಾರಿಗೆ ಪ್ರಶಸ್ತಿ ಪಡೆದ ಸಾಧನೆ ಮಾಡಿದರು.