* ಆಗಸ್ಟ್ನಲ್ಲಿ ದೇಶದ ಚಿಲ್ಲರೆ ಹಣದುಬ್ಬರ ಶೇ 2.07ಕ್ಕೆ ಏರಿಕೆಯಾಗಿದೆ ಎಂದು ಎನ್ಎಸ್ಒ ಮಾಹಿತಿ ನೀಡಿದೆ. ಜುಲೈನಲ್ಲಿ ಇದು ಶೇ 1.61 ಇತ್ತು. 2024ರ ಆಗಸ್ಟ್ನಲ್ಲಿ ಶೇ 3.65 ದಾಖಲಾಗಿತ್ತು.* ತರಕಾರಿಗಳು, ಮಾಂಸ, ಮೀನು, ಮೊಟ್ಟೆ, ಎಣ್ಣೆ ಮತ್ತು ಬಳಕೆ ವಸ್ತುಗಳ ಬೆಲೆ ಏರಿಕೆಯಿಂದ ಹಣದುಬ್ಬರ ಹೆಚ್ಚಾಗಿದೆ. ಸಿಪಿಐ ಆಧಾರಿತ ಗುರಿ ಶೇ 4ರ ಸುತ್ತ ಇರಬೇಕೆಂದು ಆರ್ಬಿಐ ನಿರ್ಧರಿಸಿದೆ.* ಗ್ರಾಮೀಣ ಪ್ರದೇಶದಲ್ಲಿ ಹಣದುಬ್ಬರ ಜುಲೈನಲ್ಲಿ ಶೇ 1.18 ಇತ್ತು, ಆಗಸ್ಟ್ನಲ್ಲಿ ಶೇ 1.69ಕ್ಕೆ ಏರಿಕೆಯಾಗಿದೆ. ನಗರದಲ್ಲಿ ಇದು ಶೇ 2.1ರಿಂದ ಶೇ 2.47ಕ್ಕೆ ಹೆಚ್ಚಳವಾಗಿದೆ.* ಹೆಚ್ಚಿನ ಮಳೆ ಮತ್ತು ಪ್ರವಾಹದಿಂದ ಇಳುವರಿ ಹಾನಿಯಾಗುವ ಸಾಧ್ಯತೆ ಇದೆ, ಇದರಿಂದ ದರ ಮತ್ತಷ್ಟು ಏರಬಹುದು ಎಂದು ತಜ್ಞರು ಎಚ್ಚರಿಸಿದ್ದಾರೆ.* ರಾಜ್ಯಗಳ ಪೈಕಿ ಕೇರಳ ಶೇ 9.04 ಹಣದುಬ್ಬರದೊಂದಿಗೆ ಮೊದಲ ಸ್ಥಾನದಲ್ಲಿದೆ. ಕರ್ನಾಟಕ ಶೇ 3.81ರೊಂದಿಗೆ ಎರಡನೇ ಸ್ಥಾನದಲ್ಲಿದ್ದು, ಅಸ್ಸಾಂ ಅತಿ ಕಡಿಮೆ (–) ಶೇ 0.66 ದಾಖಲಿಸಿದೆ.